ಲಾಕ್ ಡೌನ್ ನಡುವೆ ಕರ್ನಾಟಕ ವಿರುದ್ಧ ಕೇರಳ ಗಡಿ ಕ್ಯಾತೆ

ಬುಧವಾರ, 1 ಏಪ್ರಿಲ್ 2020 (10:40 IST)
ಮಂಗಳೂರು: ಕೊರೋನಾವೈರಸ್ ತಡೆಗೆ ಹಲವು ರಾಜ್ಯಗಳ ಗಡಿ ಬಂದ್ ಆಗಿದ್ದು ಅಂತರ್ ರಾಜ್ಯ ಓಡಾಟವೇ ಸ್ತಬ್ಧವಾಗಿದೆ. ಆದರೆ ಕೇರಳ ಮಾತ್ರ ಗಡಿ ಮುಚ್ಚಿದ ವಿಚಾರವಾಗಿ ಕರ್ನಾಟಕ ವಿರುದ್ಧ ಕ್ಯಾತೆ ತೆಗೆದಿದೆ.


ಕೇರಳ ಕರ್ನಾಟಕ ಗಡಿಯನ್ನು ಮುಚ್ಚಿರುವ ಕರ್ನಾಟಕ ಕೇರಳದ ಕಾಸರಗೋಡಿನಿಂದ ತೆರಳುವ ಆಂಬ್ಯುಲೆನ್ಸ್ ಗಳು, ಅಗತ್ಯ ವಸ್ತಗಳ ವಾಹನಗಳಿಗೂ ಕೂಡಾ ಪ್ರವೇಶ ನೀಡುತ್ತಿಲ್ಲ. ಈ ಮೂಲಕ ಕರ್ನಾಟಕ ಉದ್ಧಟತನ ಮೆರೆಯುತ್ತಿದೆ ಎಂದು ಆರೋಪಿಸಿದೆ.

ಈ ಸಂಬಂಧ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಕೇರಳ ಸರ್ಕಾರ ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಕೊರೋನಾ ಹರಡುವಿಕೆ ತಡೆಯಲು ಕರ್ನಾಟಕ ಗಡಿ ಸಂಪೂರ್ಣವಾಗಿ ಮುಚ್ಚುವ ತೀರ್ಮಾನ ಕೈಗೊಂಡಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ