ಬಿಸಿಸಿಐಗಾದ ನಷ್ಟ ಪರಿಹರಿಸಲು ವೇತನ ತ್ಯಾಗ ಮಾಡಲಿರುವ ವಿರಾಟ್ ಕೊಹ್ಲಿ ಪಡೆ

ಬುಧವಾರ, 1 ಏಪ್ರಿಲ್ 2020 (10:17 IST)
ಮುಂಬೈ: ಕೊರೋನಾವೈರಸ್ ನಿಂದಾಗಿ ಐಪಿಎಲ್ ರದ್ದಾಗುವ ಭೀತಿಯಲ್ಲಿದೆ. ಇದರಿಂದಾಗಿ ಬಿಸಿಸಿಗೆ ಹಲವು ಕೋಟಿ ರೂ. ನಷ್ಟವಾಗಲಿದೆ. ಉಳಿದ ಕೆಲವು ಟೂರ್ನಿಗಳೂ ಅನಿಶ್ಚಿತತೆಯಲ್ಲಿದೆ.


ಈ ನಷ್ಟ ಪರಿಹಾರಕ್ಕೆ ಈಗ ಟೀಂ ಇಂಡಿಯಾ ಕ್ರಿಕೆಟಿಗರೂ ಕೈ ಜೋಡಿಸುವ ಸಾಧ‍್ಯತೆಯಿದೆ. ಈ ಮೂಲಕ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋ, ಮೆಸ್ಸಿ ಹಾದಿ ಹಿಡಿಯಲಿದ್ದಾರೆ.

ಕಠಿಣ ಪರಿಸ್ಥಿತಿ ನಿಭಾಯಿಸಲು ಫುಟ್ಬಾಲಿಗರು ತಮ್ಮ ವೇತನದಲ್ಲಿ ಶೇ.70 ರಷ್ಟು ಕಡಿತ ಮಾಡಿಕೊಳ್ಳಲಿದ್ದಾರೆ. ದುಬಾರಿ ಸಂಭಾವನೆ ಪಡೆಯುವ ಟೀಂ ಇಂಡಿಯಾ ಕ್ರಿಕೆಟಿಗರೂ ಇದೇ ಕೆಲಸ ಮಾಡಬೇಕು ಎಂದು ಬಿಸಿಸಿಐ ಮೂಲಗಳೇ ಸೂಚಿಸಿವೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ