ಆನೆಗುಡ್ಡೆ ವಿನಾಯಕ ದೇವಸ್ಥಾನ

ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಹೆದ್ದಾರಿಯಿಂದ 1 ಕಿಲೋಮೀಟರ್ ದೂರದಲ್ಲಿರುವುದೇ ಆನೆಗುಡ್ಡ.

ಅತೀ ಪುರಾತನವಾದ ಈ ದೇವಸ್ಥಾನಕ್ಕೆ ದಿನನಿತ್ಯ ಸಾವಿರಾರು ಭಕ್ತಾ ದಿಗಳು ಆಗಮಿಸುತ್ತಾರೆ. ಶ್ರೀ ದೇ ವರ ದರ್ಶನ ಪಡೆದು ಕೃತಾರ್ಥರಾಗುತ್ತಾರೆ.ಇಲ್ಲಿ ಬೃಹತ್ ಭೋಜನ ಶಾಲೆಯಿದೆ. ಭಕ್ತಾದಿಗಳಿಗೆ ಇಲ್ಲಿ ದಿನನಿತ್ಯ ಅನ್ನದಾಸೋಹ ನಡೆಯುತ್ತಿದೆ.

ಪೂಜಾ ವಿಧಿ ವಿಧಾನಗಳು ಹೀಗೆ :
ದೇವಾಲಯದಲ್ಲಿ ಬೆಳಿಗ್ಗೆ 5ಗಂಟೆಗೆ , ಮಧ್ಯಾಹ್ನ 1 ಗಂಟೆಗೆ, ರಾತ್ರಿ 8.30ಕ್ಕೆ, ತ್ರಿಕಾಲ ಪೂಜೆ ನಡೆಯುತ್ತದೆ. ಬೆಳಗ್ಗೆ 6ರಿಂದ ರಾತ್ರಿ 9ರ ತನಕ ಅವಿರತವಾಗಿ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಮುಕ್ತವಾಗಿರುತ್ತದೆ. ವಾರದ ಆದಿತ್ಯವಾರ, ಮಂಗಳವಾರ, ಶುಕ್ರವಾರ, ಹಾಗೂ ಸಂಕ್ರಮಣ, ಸಂಕಷ್ಟಹರ ಚತುರ್ಥಿ, ಹಾಗೂ ಗಣೇಶ ಚತುರ್ಥಿಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರುತ್ತಾರೆ.

ಪರವೂರಿನಿಂದ ಬಂದ ಭಕ್ತಾದಿಗಳಿಗೆ ಇಲ್ಲಿ ಅಥಿತಿ ಗೃಹವಿದೆ. ಮಧ್ಯಾಹ್ನ ದೂಟದ ವ್ಯವಸ್ಥೆಯಿದೆ. ಸತ್ಯಗಣಪತಿ ವ್ರತ, ಗಣಹೋ, ರಂಗಪೂಜೆ ಇಲ್ಲಿ ವಿಶೇಷವಾಗಿ ನಡೆಯುತ್ತವೆ. ದಕ್ಷಿಣ ಭಾರತದಲ್ಲೇ ಪ್ರಸಿದ್ಧ ದೇವಸ್ಥಾನ ಎಂಬ ಹೆಗ್ಗಳಿಕೆ ಪಡೆಇದಿರುವ ಈ ಪುಣ್ಯಕ್ಷೇತ್ರಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ
.
ಪರಶುರಾಮ ಸೃಷ್ಟಿಯ ಸಪ್ತ ಕ್ಷೇತ್ರಗಳಲ್ಲಿ ಕುಂಭಾಸಿಯೂ ಒಂದು. ಇದನ್ನು ಕೃತಯುಗದಲ್ಲಿ ಹರಿಹರ ಕ್ಷೇತ್ರವೆಂದೂ ತ್ರೇತಾಯುಗದಲ್ಲಿ ಮಧುಕಾನನವೆಂದೂ, ದ್ವಾಪರದಲ್ಲಿ ಗೌತಮ ಕ್ಷೇತ್ರವೆಂದೂ ಕಲಿಯುಗದಲ್ಲಿ ಕುಂಭಾಸಿಯೆಂದು ಕರೆಯುತ್ತಾರೆ.

ವರಬಲ ಪ್ರಮ ತ್ತನಾದ ಕುಂಭಾಸುರನಿಂದ ತಪೋನುಷ್ಠಾನ ನಿರತರಾದ ಗೌತಮ ಮುನಿಗಳ ಯಜ್ಞಯಾಗಕ್ಕೆ ಭಂಗ ಬ ಂ ದಿತಂತೆ. ಅದೇ ಸಂದರ್ಭದಲ್ಲಿ ವನವಾಸದಿಂದ ಹಿಂತಿರುಗುತ್ತಿದ್ದ ಪಾಂಡವರು ಕುಂಭಾಸುರನ ಹಾವಳಿಯನ್ನು ಗಮನಿಸಿ ಗೌತಮ ಮಹರ್ಷಿಗಳನ್ನು ಆತನ ಉಪಟಳದಿಂದ ಪಾರುಮಾಡಲು ಭೀಮಸೇನನು ಕಾಳಗಕ್ಕಿಳಿದ ಎಂಬ ನಂಬಿಕೆ ಇಲ್ಲಿನ ಜನರಲ್ಲಿ ಹಸನಾಗಿ ಉಳಿದಿದೆ.

ಹೀಗೆ ಯುದ್ಧದಲ್ಲಿ ಗೆದ್ದು ವಿಘ್ನೇಶನನ್ನು ಸ್ಥಾಪಿಸಲಾಯಿತು ಎಂದು ಇತಿಹಾಸ ಹೇಳುತ್ತದೆ.

ವೆಬ್ದುನಿಯಾವನ್ನು ಓದಿ