ಹದ್ದಿಗೆ ಡಿಕ್ಕಿ ಹೊಡೆದ ವಿಮಾನ: ಪ್ರಯಾಣಿಕರು ಅಪಾಯದಿಂದ ಪಾರು

ಶನಿವಾರ, 19 ಏಪ್ರಿಲ್ 2014 (17:25 IST)
PR
PR
ಹುಬ್ಬಳ್ಳಿ: ಮುಂಬೈನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನಕ್ಕೆ ರನ್‌ವೇನಲ್ಲಿ ಹದ್ದು ಡಿಕ್ಕಿಹೊಡೆದು ವಿಮಾನದ ಮುಂಭಾಗ ಜಖಂಗೊಂಡಿದೆ. ಹುಬ್ಬಳ್ಳಿಯ ಏರ್‌ಪೋರ್ಟ್‌ನಲ್ಲಿ ಈ ಘಟನೆ ಸಂಭವಿಸಿದೆ. ವಿಮಾನದಲ್ಲಿ ಸುಮಾರು 65 ಜನರು ಪ್ರಯಾಣಿಸುತ್ತಿದ್ದರು. ಪೈಲಟ್ ಕುಳಿತುಕೊಳ್ಳುವ ವಿಮಾನದ ಮುಂಭಾಗಕ್ಕೆ ಹದ್ದು ಡಿಕ್ಕಿಹೊಡೆಯಿತೆಂದು ಹೇಳಲಾಗಿದೆ. ಇದರಿಂದ ವಿಮಾನದ ಮೂಗಿನ ಭಾಗಕ್ಕೆ ಸ್ವಲ್ಪ ಹಾನಿಯಾಗಿದ್ದು, ವಿಮಾನ ನಿಧಾನವಾಗಿ ರನ್‌ವೇನಲ್ಲಿ ಚಲಿಸುತ್ತಿದ್ದರಿಂದ ಹೆಚ್ಚಿನ ಅನಾಹುತವಾಗಿಲ್ಲ.

ಮತ್ತೆ ಮುಂಬೈಗೆ ತೆರಳಬೇಕಿದ್ದ ವಿಮಾನದ ಫ್ಲೈಟ್ ರದ್ದುಮಾಡಲಾಗಿದೆ. ವಿಮಾನನಿಲ್ದಾಣ ಹೊರವಲಯದಲ್ಲಿದ್ದು ಸಮೀಪದ ಹೊಟೆಲ್‌ಗಳಲ್ಲಿ ತ್ಯಾಜ್ಯ ಮಾಂಸದ ಚೂರುಗಳನ್ನು ಎಸೆಯುವುದರಿಂದ ಹದ್ದುಗಳು ಹಾರಾಡುತ್ತಿರುತ್ತವೆ. ಇದನ್ನು ತಡೆಯಲು ಪಾಲಿಕೆ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲವೆಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ