ಮಕರರಾಶಿಯಲ್ಲಿ ಹುಟ್ಟಿದವರಿಗೆ ಐಶ್ವರ್ಯ ಪ್ರಾಪ್ತಿಯಾಗಲು ಅಮಾವಾಸ್ಯೆ ದಿನದಂದು ಹೀಗೆ ಮಾಡಿ

ಭಾನುವಾರ, 29 ಡಿಸೆಂಬರ್ 2019 (06:20 IST)
ಬೆಂಗಳೂರು : ಎಲ್ಲರಿಗೂ ತಾವು ಧನವಂತರಾಗಬೇಕೆಂಬ ಆಸೆ ಇರುತ್ತದೆ. ಅದಕ್ಕಾಗಿ ಅವರು ತಾವು ಹುಟ್ಟಿದ ರಾಶಿಯ ಪ್ರಕಾರ ಪರಿಹಾರವನ್ನು ಮಾಡಬೇಕು. ಹಾಗಾದ್ರೆ ಮಕರರಾಶಿಯಲ್ಲಿ ಹುಟ್ಟಿದವರು ಬೇಗ ಶ್ರೀಮಂತರಾಗಲು ಹೀಗೆ ಮಾಡಿ.ಮಕರರಾಶಿಯಲ್ಲಿ ಹುಟ್ಟಿದವರು ಪೂರ್ವ ದಿಕ್ಕಿನಲ್ಲಿ ಇರುವ ಮನೆಯಲ್ಲಿ ವಾಸಿಸಬಾರದು, ಅದರ ಬದಲು ಬೇರೆ ಯಾವ ದಿಕ್ಕಿನ ಮನೆಯಲ್ಲಿಯೂ ವಾಸಿಸಬಹುದು. ಮಕರ ರಾಶಿಯವರು ನಂದಿ ಬಟ್ಟಲು ಗಿಡ, ಮಲ್ಲಿಗೆ ಹೂ, ಬಿಳಿ ದಾಸವಾಳ ಹೂವಿನ ಗಿಡ ಬೆಳೆಸಿ ಪ್ರತಿದಿನ ನೀರು ಹಾಕಬೇಕು. ಹೀಗೆ ನೀವು ಮಾಡಿದರೆ ನಿಮಗೆ ಬೇಹ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಮತ್ತು ಸುವಾಸನೆಯುಕ್ತ ಗಿಡಗಳನ್ನು ಬೆಳಸಿದರೆ ನಿಮಗೆ ಲಕ್ಷ್ಮೀ ಕಟಾಕ್ಷ ದೊರೆಯುತ್ತದೆ.


ಈ ರಾಶಿಯಲ್ಲಿ ಹುಟ್ಟಿದವರು ಅಮವಾಸ್ಯೆ ದಿನದಂದು ಅಕ್ಕಿ ಮತ್ತು ತರಕಾರಿಗಳನ್ನು ಬ್ರಾಹ್ಮಣರಿಗೆ ದಾನ ನೀಡಬೇಕು.ಇದರಿಂದ ಗ್ರಹಗಳ ಅನುಗ್ರಹದಿಂದ ಬೇಗ ಧನ ಪ್ರಾಪ್ತಿಯಾಗುತ್ತದೆ. ಹಾಗೇ ಇವರು ಈಶ್ವರನ ದೆವಾಲಯದ ಅರ್ಚಕರಿಗೆ ಗೋಧಿ ದಾನ ಮಾಡಬೇಕು. ಇದರಿಂದ ಕಷ್ಟ ದೂರವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ