ಬೆಳ್ಳುಳ್ಳಿಯನ್ನು ತಿನ್ನುವ ಸರಿಯಾದ ಕ್ರಮ ಹೀಗಿರಲಿ

Krishnaveni K

ಗುರುವಾರ, 28 ಮಾರ್ಚ್ 2024 (14:02 IST)
ಬೆಂಗಳೂರು: ನಮ್ಮ ದೈನಂದಿನ ಅಡುಗೆಯಲ್ಲಿ ಬೆಳ್ಳುಳ್ಳಿಯನ್ನು ಬಳಸುತ್ತೇವೆ. ಆರೋಗ್ಯ ದೃಷ್ಟಿಯಿಂದಲೂ ಬೆಳ್ಳುಳ್ಳಿ ನಮ್ಮ ದೇಹಕ್ಕೆ ಅತ್ಯಗತ್ಯ. ಆದರೆ ಬೆಳ್ಳುಳ್ಳಿಯನ್ನು ಸರಿಯಾದ ಕ್ರಮದಲ್ಲಿ ಸೇವಿಸಿದರೆ ಮಾತ್ರ ಅದರ ಫಲ ನಮಗೆ ಸಿಗುವುದು.

ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ಅಥವಾ ಕೆಲವೊಮ್ಮೆ ಆರೋಗ್ಯ ದೃಷ್ಟಿಯಿಂದ ಹಾಗೆಯೇ ಸೇವಿಸುತ್ತೇವೆ. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸುವುದರಿಂದ ಅಸಿಡಿಟಿ ಸಮಸ್ಯೆಗೆ ಪರಿಹಾರ. ಜೊತೆಗೆ ಬೆಳ್ಳುಳ್ಳಿಯಿಂದ ಹೃದಯ, ರಕ್ತದೊತ್ತಡ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.

ಪೊಟಾಶಿಯಂ, ರಂಜಕ, ಮೆಗ್ನಿಶಿಯಂ ಮುಂತಾದ ಅಂಶಗಳು ಬೆಳ್ಳುಳ್ಳಿಯಲ್ಲಿ ಹೇರಳವಾಗಿದೆ. ಜೀರ್ಣಕ್ರಿಯೆಗೆ, ಮೆದುಳಿನ ಆರೋಗ್ಯಕ್ಕೆ, ಹೃದಯದ ಆರೋಗ್ಯಕ್ಕೆ, ಸೋಂಕು ನಿವಾರಣೆಗೆ, ದೃಷ್ಟಿ ಸುಧಾರಣೆಗೆ ಬೆಳ್ಳುಳ್ಳಿ ಸೇವಿಸುವುದು ತುಂಬಾ ಉಪಯುಕ್ತವಾಗಿದೆ.

ಇಷ್ಟೊಂದು ಪ್ರಯೋಜನಕಾರಿಯಾಗಿರುವ ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ಮಾತ್ರವಲ್ಲ, ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ 1 ರಿಂದ 2 ಎಸಳುಗಳನ್ನು ತಿನ್ನುತ್ತಾ ಬಂದಿದೆ. ಬೆಳ್ಳುಳ್ಳಿಯಲ್ಲಿರುವ ಅಂಶಗಳು ಶರೀರಕ್ಕೆ ಸರಿಯಾಗಿ ಸಿಕ್ಕಬೇಕೆಂದರೆ ಖಾಲಿ ಹೊಟ್ಟೆಯಲ್ಲಿ ಹಸಿ ತಿನ್ನುವುದು ಸೂಕ್ತ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ