ಸಿಎಂ ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ಆಶೀರ್ವಾದ ಸಿಕ್ಕಿಲ್ಲ : ಹೆಚ್‌ಡಿಕೆ

ಶನಿವಾರ, 21 ಏಪ್ರಿಲ್ 2018 (17:08 IST)
ಸಿಎಂ ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ಆಶೀರ್ವಾದ ಸಿಕ್ಕಿಲ್ಲ. ಆದ್ದರಿಂದ ಬನಶಂಕರಿ ದೇವಿ ಆಶಿರ್ವಾದ ಪಡೆಯಲು ಬರುತ್ತಿದ್ದಾರೆ ಎಂದು ಮಾಜಿ ಸಿಎಮ್ ಹೆಚ್. ಡಿ‌. ಕುಮಾರಸ್ವಾಮಿ ಲೇವಡಿ‌ ಮಾಡಿದರು. 
ಬಾಗಲಕೋಟೆ ‌ಜಿಲ್ಲೆ ಬಾದಾಮಿಯಲ್ಲಿ ಮಾತನಾಡಿದ ಹೆಚ್ ಡಿ ಕೆ,  ಸಿಎಮ್  ಬನಶಂಕರಿ ಆಶೀರ್ವಾದ ಪಡೆಯೋಕೆ ಬರುತ್ತಿದ್ದಾರೆ. ಆದರೆ ಬನಶಂಕರಿ ದೇವಿ ಆಶೀರ್ವಾದ ಕೂಡ ಸಿದ್ದರಾಯ್ಯಗೆ ಧಕ್ಕೋದಿಲ್ಲ. ಬಾದಾಮಿ ಮತ್ತು ಚಾಮುಂಡೇಶ್ವರಿ ಎರಡು ಕ್ಷೇತ್ರದಲ್ಲಿ ಸಿಎಮ್ ಗೆ ಸೋಲು ಖಚಿತ ಎಂದರು.
 
 ಇನ್ನು ಬಿಎಸ್ ವೈ ಮತ್ತು ಸಿದ್ದರಾಮಯ್ಯ  ಮುಂದಿನ ಸಿಎಮ್ ನಾನೆ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳುತ್ತಿದ್ದಾರೆ. ನಾನು ಸಿಎಮ್ ಆಗುತ್ತೇನೆ ಎಂದು ಎಲ್ಲೂ ಹೇಳಿಲ್ಲ ಜನರ ಮುಂದೆ ಮನವಿ ಮಾಡಿದ್ದೇನೆ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದೇನೆ ಎಂದರು.
 
ನಮ್ಮ ಅಭ್ಯರ್ಥಿ ಹನುಮಂತ ಮಾವಿನಮರದ ಜನಸಾಮಾನ್ಯರ ಮನಸ್ಸಿನಲ್ಲಿದ್ದಾರೆ ಎಂದ ಹೆಚ್ ಡಿ ಕೆ, ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಯಾರೇ ಬಂದರೂ ನಮ್ಮ ಅಭ್ಯರ್ಥಿ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು. 
 
ಇನ್ನು ಬಾದಾಮಿ ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ ಕೆಂಪಯ್ಯ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಚ್ ಡಿ ಕೆ,ನಮ್ಮ ಅಭ್ಯರ್ಥಿ ಕೆಂಪಯ್ಯ ಜೊತೆ ಸಂಪರ್ಕ ಹೊಂದಿಲ್ಲ.ಹಾಗೇನಾದರೂ ಸಂಪರ್ಕ ಹೊಂದಿದ್ದೆ ಆದರೆ ಅದು ಸಿದ್ದರಾಮಯ್ಯನವರನ್ನು ಮುಗಿಸೋದಕ್ಕೆ ಕೆಂಪಯ್ಯ ಮಾಡಿದ ಪ್ಲಾನ್ ಆಗಿರಬಹುದು.ಕೆಂಪಯ್ಯ ಬಹಳ ಜನರ ಕಥೆ ಮುಗಿಸಿದ್ದಾರೆ ಎಂದರು .

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ