ಕ್ರಿಶ್ಚನ್ರ ಪವಿತ್ರ ಗ್ರಂಥವಾದ ಬೈಬಲ್ ಎರಡು ವಿಭಾಗಗಳಾಗಿ ಆಚರಣೆಯಲ್ಲಿದೆ.ಮೊದಲನೆಯದು ಹಳೆಯ ಒಡಂಬಡಿಕೆ(ಓಲ್ಡ್ ಟೆಸ್ಟಮೆಂಟ್). ಎರಡನೆಯದು ಹೊಸ ಒಡಂಬಡಿಕೆ(ನ್ಯೂ ಟೆಸ್ಟಮೆಂಟ್) ಎಂದು ಗುರುತಿಸಲಾಗುತ್ತಿದೆ.
ಈ ಸಂಗ್ರಹದಲ್ಲಿ ವಿಶ್ವ ಸೃಷ್ಟಿಯಿಂದ ಮೊದಲ್ಗೊಂಡು ಆಯಾ ಕಾಲದಲ್ಲಿ ನಡೆದ ವಿಚಾರಗಳನ್ನು ಒಳಗೊಂಡಿದೆ. ಇದು ಅತಿ ಪುರಾತನ ಘಟನೆಗಳನ್ನು ತಿಳಿಸುವುದರಿಂದ ಇದು ಬಾಯಿಂದ ಬಾಯಿಗೆ ಬಂದು ಅನೇಕ ವರ್ಷಗಳ ನಂತರ ಲಿಖಿತ ರೂಪವನ್ನು ಪಡೆದಿದೆ.
ಮೊದಲು ಹಿಬ್ರೂ,ಅರೈಮೆಕ್,ಸಿರಿಯಾಕ್,ಲ್ಯಾಟಿನ್,ಗ್ರೀಕ್ ಮುಂತಾದ ಬಾಷೆಗಳಲ್ಲಿ ಲಿಖಿತರೂಪ ಪಡೆಯಿತು. ಈ ಭಾಷೆಗಳು ಕೆಲವು ಈಗ ರೂಢಿಯಲ್ಲಿಲ್ಲ ಎಂಬುದು ಗಮನಾರ್ಹ.ಹಳೆಯ ಒಡಂಬಡಿಕೆಯಲ್ಲಿ ಒಟ್ಟು 39 ಗ್ರಂಥಗಳಿವೆ.ಅವುಗಳನ್ನು ವಿವಿಧ ಭಾಗಗಳಲ್ಲಿ ವರ್ಗೀಕರಿಸಲಾಗಿದೆ.
II.ಚಾರಿತ್ರಿಕಾಗಮಗಳು(12)- 1.ಯೋಷುವಾ 2.ನ್ಯಾಯಾಧಿಪತಿಗಳು 3.ರೂತ್ 4.ಸ್ಯಾಮುವೇಲ್ I 5.ಸ್ಯಾಮುವೇಲ್ II 6.ರಾಜರು I 7.ರಾಜರುII 8.ನಾಳಾಗಮನ I 9.ನಾಳಾಗಮನ II 10.ಎಜ್ರಾ 11.ನೆಕೇಮಿಯಾ 12.ಎಸ್ತರ್
IV.ಪ್ರವಾದಿ ದರ್ಶನ (a). ಮುಖ್ಯ ಪ್ರವಾದಿಗಳು(5) 1.ಏಸಾಯ 2.ಏರೋಮಿಯಾ 3.ಪುಲಂಬಲ್ 4 ಏಸೇಕಿಯಲ್ 5.ಡೇವಿಯಲ್ (b).ಕಿರು ಪ್ರವಾದಿಗಳು(12) 1.ಒಸಿಯಾ 2.ಯೋವೇಲ್ 3.ಆಮೋಸ್ 4.ಒಪತಿಯಾ 5.ಯೋನಾ 6.ಮೀಕಾ 7.ನಾಕೂಮ್ 8.ಆಬಕೂಕ್ 9.ಚೆಪ್ಪನಿಯಾ 10.ಆಗಾಯ್ 11.ಸಕರಿಯಾ 12.ಮಲ್ಕಿಯಾ ಇದರ ಜೊತೆಗೆ ಹಳೆಯ ಒಡಂಬಡಿಕೆಯಲ್ಲಿ ಏಳು ಪುಸ್ತಕಗಳು ಸೇರುತ್ತವೆ.