ಕ್ರಿಸ್ತ ಧರ್ಮದ ಆರಾಧನೆ ಮತ್ತು ಆಚರಣೆಗಳು

ತಮ್ಮ ದೈನಂದಿನ ಆಚರಣೆಗಳಲ್ಲಿ ಎಲ್ಲರೂ ಏಸುಕ್ರಿಸ್ತನ ಜೀವನವನ್ನು ಅನುಸರಿಸಲು ಪ್ರಯತ್ನಿಸಬೇಕು ಎಂದು ಕ್ರೈಸ್ತರು ನಂಬುತ್ತಾರೆ. ಇದರಲ್ಲಿ ಹತ್ತು ದೈವಾಜ್ಞೆಗಳು ಸೇರಿವೆ ಎಂಬುದು ಹೆಚ್ಚಿನವರ ನಂಬುಗೆ.

ಇದರಲ್ಲಿ ಹಸಿದವರಿಗೆ ಉಣಿಸು, ಆಶ್ರಯವಿಲ್ಲದವರಿಗೆ ಆಶ್ರಯದಾತನಾಗು ಮತ್ತು ಸ್ನೇಹಿತ ಮತ್ತು ವೈರಿಯನ್ನು ಒಂದೇ ಸಮವಾಗಿ ಪರಿಗಣಿಸು ಎಂಬ ತತ್ವಗಳು ಒಳಗೊಂಡಿವೆ.
ಪ್ರತಿಯೊಬ್ಬರನ್ನು ಪ್ರೀತಿಸು ಎಂಬುದು ಏಸುವಿನ ತತ್ವ. ಬೈಬಲ್ ಪಠಣ ಮತ್ತು ಪ್ರಾರ್ಥನೆಯನ್ನು ಕ್ರಿಶ್ಚಿಯನ್ನರು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.

ತಮ್ಮೆಲ್ಲ ಪಾಪಗಳನ್ನು ಪರಮಾತ್ಮನ ಅನುಗ್ರಹದಿಂದ ಮಾತ್ರ ತೊಡೆದು ಹಾಕಲು ಸಾಧ್ಯ ಎಂಬುದಾಗಿ ಕ್ರೈಸ್ತ ಧರ್ಮ ಹೇಳುತ್ತದೆ. ನೈತಿಕ ಮತ್ತು ಆಧ್ಯಾತ್ಮಿಕ ಪ್ರಗತಿಯು ಪರಮಾತ್ಮನ ಸಹಾಯದಿಂದ ಮಾತ್ರ ಸಾಧ್ಯ ಮತ್ತು, ದೇವರನ್ನು ನಂಬುವವನಲ್ಲಿ ವಾಸವಾಗಿರುವ ಪವಿತ್ರಾತ್ಮನಿಂದ ಮಾತ್ರ ಸಾಧ್ಯ.

ಕ್ರಿಸ್ತನ ಜೀವನ, ಮರಣ ಮತ್ತು ಪುನರುಜ್ಜೀವನ ಹಾಗೂ ಕ್ರಿಸ್ತನನ್ನು ನಂಬುವುದರಿಂದ ಪಾಪವು ಕಳೆಯುತ್ತದೆ ಮತ್ತು ಇವುಗಳಿಂದೆಲ್ಲ ಮುಕ್ತಿಹೊಂದಿ ಹೊಸ ಜೀವನ ಸಾಧ್ಯ ಎಂಬುದಾಗಿ ಕ್ರಿಸ್ತ ಧರ್ಮ ಸಾರುತ್ತದೆ.

ವೆಬ್ದುನಿಯಾವನ್ನು ಓದಿ