ಎಲ್ಲೆಡೆ ಸಡಗರದ ಈದುಲ್ ಜುಹಾ

PTI
ಮುಸ್ಲಿಂ ಧರ್ಮಾನುಯಾಯಿಗಳು ಶುಕ್ರವಾರದಂದು ತ್ಯಾಗ-ಬಲಿದಾನಗಳ ಸಂಕೇತವಾದ ಈದ್ ಉಲ್ ಜುಹಾ ಆಚರಿಸಿಕೊಳ್ಳುತ್ತಿದ್ದಾರೆ. ಮೆಕ್ಕಾದಲ್ಲಿನ ವಾರ್ಷಿಕ ಹಜ್ ಯಾತ್ರೆ ಗುರುವಾರ ಅಂತಿಮಗೊಂಡ ಬೆನ್ನಲ್ಲೇ, ಭಾರತದೆಲ್ಲೆಡೆ ಈದ್ ಮಿಲಾದ್ ಅನ್ನು ಇಂದು ಆಚರಿಸಲಾಗುತ್ತಿದೆ.

ಶುಕ್ರವಾರ ಬೆಳಿಗ್ಗೆ ದೇಶದ ವಿವಿಧ ಮಸೀದಿಗಳಿಗೆ ತೆರಳಿದ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿ, ಅಲ್ಲಾಹು ಹೆಸರಲ್ಲಿ ಪರಸ್ಪರ ಶುಭಾಯವನ್ನು ವಿನಿಮಯ ಮಾಡಿಕೊಂಡರು.

ಶುಭಹಾರೈಕೆ: ಈದ್ ಮಿಲಾದ್ ಅಂಗವಾಗಿ ದೇಶದಲ್ಲಿನ ಮುಸ್ಲಿಂ ಸಮುದಾಯದವರಿಗೆ ಶುಭ ಹಾರೈಸಿರುವ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹಾಗೂ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು, ಹಬ್ಬದ ಈ ಶುಭ ಸಂದರ್ಭದಲ್ಲಿ ದೇಶದ ಪ್ರಗತಿಗೆ ಒಗ್ಗೂಡಿ ಶ್ರಮಿಸುವಂತೆ ಕರೆ ನೀಡಿದರು.

ಸೇವೆ-ತ್ಯಾಗ ,ಬಲಿದಾನದ ಪ್ರತೀಕವಾಗಿರುವ ಈದ್ ಹಬ್ಬದ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಾಗಿ ದೇಶದ ಪ್ರಗತಿಗೆ ಶ್ರಮಿಸಬೇಕಾಗಿದೆ ಎಂದು ಪಾಟೀಲ್ ತಿಳಿಸಿದ್ದಾರೆ.

ಹಜ್‌‌ಯಾತ್ರೆಗೆ ತೆರೆ: ಈ ಬಾರಿ ಪವಿತ್ರ ಹಜ್ ಯಾತ್ರೆಯಲ್ಲಿ ಭಾರತ ಸೇರಿದಂತೆ ವಿವಿಧೆಡೆಯಿಂದ ಸುಮಾರು ಎರಡು ದಶಲಕ್ಷ ಮುಸ್ಲಿಮರು ಆಗಮಿಸಿದ್ದರು.

ಗುರುವಾರದಂದು ವಾರ್ಷಿಕ ಹಜ್ ಯಾತ್ರೆಯ ಅಂತಿಮ ದಿನದಂದು ಸೌದಿಯ ಪವಿತ್ರ ನಗರ ಮೀನಾದಲ್ಲಿ ಸೈತಾನನಿಗೆ ಕಲ್ಲು ಹೊಡೆಯುವ ಕಾರ್ಯದಲ್ಲಿ ಭಾಗವಹಿಸುವ ಮೂಲಕ ಐದು ದಿನಗಳ ಯಾತ್ರೆಗೆ ತೆರೆ ಬಿದ್ದಿತ್ತು.

ಭಾರತದಿಂದ ಅಂದಾಜು 1.5 ಲಕ್ಷ ಮಂದಿ ಮುಸ್ಲಿಮರು ಹಜ್ ಯಾತ್ರೆಯಲ್ಲಿ ಪಾಲ್ಗೊಂಡಿರುವುದಾಗಿ ಮೀನಾದಲ್ಲಿನ ಭಾರತೀಯ ವಕ್ತಾರರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ