ಸದಕ್-ಎ-ಫಿತ್ರ್‌ ಪೂರ್ತಿಗೊಳಿಸಿ

ಮೊಹಮ್ಮದ್ ಇಬ್ರಾಹಿಂ ಖುರೇಶಿ
ರಂಜಾನ್ ಹಬ್ಬ ಮಾನವರೆಲ್ಲರೂ ಸರಿಸಮಾನರು ಎನ್ನುವ ಸಂದೇಶವನ್ನು ಸಾರುತ್ತದೆ. ಜನರು ಪರಸ್ಪರ ಸಂತೋಷದಲ್ಲಿ ಭಾಗಿಯಾಗಿ, ಕಷ್ದದಲ್ಲಿದ್ದವರಿಗೆ ತಮ್ಮಿಂದ ಆದಷ್ಟು ಸಹಾಯ ಹಸ್ತ ನೀಡಿ ಪ್ರತಿಯೊಬ್ಬ ಬಡವರು ಹಬ್ಬವನ್ನು ಆಚರಿಸುವಂತೆ ನೋಡಿಕೊಳ್ಳಬೇಕು ಎನ್ನುವ ಸಂದೇಶವನ್ನು ಸಾರುತ್ತದೆ.

ಪೈಗಂಬರ್ ಹಜರತ್ ಮೊಹಮ್ಮದ್ ಅವರು ಸದಕ್- ಎ- ಫಿತ್ರ್ ಅನ್ನು ಅವಶ್ಯಕ ದಾನವೆಂದು ಕರೆದಿದ್ದಾರೆ. ಈ ದಾನವನ್ನು ರಂಜಾನ್ ಉಪವಾಸ ಮುಗಿದ ಮೇಲೆ ನೀಡಲಾಗುತ್ತದೆ. ಈ ದಾನವನ್ನು ಅನ್ಯಾಯ ಮತ್ತು ಅನವಶ್ಯಕ ಮಾತುಗಳಿಂದ ದೂರವಿರಲು ನೀಡಲಾಗುತ್ತದೆ.

ರೋಜಾ (ಉಪವಾಸ)ದ ಸಂದರ್ಭದಲ್ಲಿ ಮನುಷ್ಯರಿಂದ ಸಹಜವಾಗಿ ಕೆಲವು ತಪ್ಪುಗಳಾಗುತ್ತವೆ. ನಾಲಿಗೆ ಮತ್ತು ಕಣ್ಣುಗಳಿಂದ ತಪ್ಪುಗಳಾಗಬಹುದು. ಹಜರತ್ ಅಬ್ದುಲ್ಲಾ ಬಿನ್ ಉಮರ್ ರಾಜಿ ಅವರು ಸಂದೇಶವನ್ನು ನೀಡಿ, ಅಲ್ಲಾಹ್‌ನ ಪ್ರತಿನಿಧಿಗಳು ಸದಕ್-ಎ-ಫಿತ್ರ್ ( ಅಂದಾಜು 1700 ಗ್ರಾಂ) ಖರ್ಜೂರ ಸೇರಿದಂತೆ ಫಲಹಾರಗಳನ್ನು ನೀಡುವುದು ಪ್ರತಿಯೊಬ್ಬ ಮುಸ್ಲಿಮರ ಕರ್ತವ್ಯವಾಗಿದೆ. ದಾನ ಮಾಡುವವರು ಸ್ವತಂತ್ರರಾಗಿರಲಿ ಅಥವಾ ಗುಲಾಮರಾಗಿರಲಿ, ಮಹಿಳೆಯರಾಗಿರಲಿ ಪುರುಷರಾಗಿರಲಿ ದಾನ ನೀಡುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಬಡವರಿಗೆ ದಾನವನ್ನು ನೀಡುವುದರಿಂದ ಮನುಷ್ಯ ಅಪರಾಧ ಹಾಗೂ ಹೊಲಸಿನಿಂದ ದೂರವಾಗಿ ಪವಿತ್ರವಾಗುತ್ತಾನೆ.

ಸದಕ್- ಎ- ಫಿತ್ರ್
ರಂಜಾನ್ ಉಪವಾಸದ ನಂತರ ದಾನವನ್ನು ಕೊಡುವುದು ಉಚಿತವಾಗಿದೆ. ಫಕೀರ್ ಹಾಗೂ ಅಸಹಾಯಕರಿಗೆ ಮತ್ತು ಅವಲಂಬಿತ ಬಡವರಿಗೆ ದಾನವನ್ನು ನೀಡುವುದು ಉತ್ತಮ. ಹಬ್ಬದಂದು ಚಂದ್ರನನ್ನು ಕಂಡಕೂಡಲೇ ಫಿತ್ರ್ (ದಾನ) ಕೊಡುವುದು ಅಧಿಕೃತವಾಗುತ್ತದೆ. ಹಬ್ಬದ ನಮಾಜ್ ಮಾಡುವುದಕ್ಕಿಂತ ಮೊದಲು ಫಿತ್ರ್ ದಾನವನ್ನು ನೀಡಬೇಕು. ಕೆಲ ಕಾರಣಗಳಿಂದಾಗಿ ನಮಾಜ್‌‌ಗಿಂತ ಮೊದಲು ಕೊಡಲಾಗದಿದ್ದಲ್ಲಿ ನಮಾಜ್ ನಂತರವೂ ದಾನ ಮಾಡಿದರೆ ತಪ್ಪಲ್ಲ. ಆದರೆ ನಮಾಜ್‌ಗಿಂತ ಮೊದಲು ಫಿತ್ರ್( ದಾನ) ಕೊಡಲು ಪ್ರಯತ್ನಿಸಬೇಕು.

ಫಿತ್ರ್(ದಾನ)ದಲ್ಲಿ ಎಲ್ಲ ರೀತಿಯ ಅಡುಗೆ ಸಾಮಾನುಗಳನ್ನು ನೀಡಲಾಗುತ್ತದೆ. ಗೋಧಿ, ಅಕ್ಕಿ, ಬೇಳೆ, ಖರ್ಜೂರ ಇತ್ಯಾದಿಗಳಿಂದ ಫಿತ್ರ್‌(ದಾನ)ವನ್ನು ಪೂರ್ತಿಗೊಳಿಸಲಾಗುತ್ತದೆ. ನಗದು ಹಣವನ್ನು ಫಿತ್ರ್ ರೂಪದಲ್ಲಿ ಕೊಡಬಹುದಾಗಿದೆ. ಉಲ್ಮಾ-ಎ-ದಿನ್‌ನೇ ಪ್ರಕಾರ ಫಿತ್ರ್(ದಾನ) 1700 ಗ್ರಾಂ ತೂಕದ ದವಸ ಧಾನ್ಯಗಳನ್ನು ನೀಡಿದಲ್ಲಿ ಫಿತ್ರ್‌ವನ್ನು ಪೂರ್ಣವಾದಂತಾಗುತ್ತದೆ.

ವೆಬ್ದುನಿಯಾವನ್ನು ಓದಿ