ಬೆಂಗಳೂರು: ಮಂಗಳವಾರ ಆಂಜನೇಯನಿಗೆ ವಿಶೇಷವಾದ ದಿನವಾಗಿದೆ. ಇಂದು ನೀವು ಅಂದುಕೊಂಡ ಕೆಲಸವಾಗಬೇಕಾದರೆ ಈ ಸ್ತೋತ್ರವನ್ನು ಹೇಳಿ ಮುಂದುವರಿಯಿರಿ.
ಆಂಜನೇಯನು ನಮ್ಮ ಜೀವನದಲ್ಲಿ ಬರುವ ಎಲ್ಲಾ ಸಂಕಟಗಳನ್ನು ಪರಿಹರಿಸಿ ಅನುಗ್ರಹಿಸುತ್ತಾನೆ. ಸ್ವತಃ ಪ್ರಭು ಶ್ರೀರಾಮಚಂದ್ರನ ಕಷ್ಟವನ್ನೇ ಪರಿಹರಿಸಿದ ಆಂಜನೇಯ. ನಮ್ಮಂತಹ ಮಾನವರು ಭಕ್ತಿಯಿಂದ ಬೇಡಿಕೊಂಡರೆ ಅನುಗ್ರಹಿಸುತ್ತಾನೆ.
ಆಂಜನೇಯ ಸ್ವಾಮಿಯನ್ನು ವಿದ್ಯೆ, ಬುದ್ಧಿ, ಉದ್ಯೋಗ, ವಿವಾಹ, ಸಂತಾನ ಇತ್ಯಾದಿ ಹಲವು ಸಮಸ್ಯೆಗಳ ಪರಿಹಾರಕ್ಕೆ ಪೂಜೆ ಮಾಡುತ್ತೇವೆ. ಅದರಲ್ಲೂ ನಾವು ಅಂದುಕೊಂಡ ಕೆಲಸವಾಗಬೇಕಾದರೆ ಗಣಪತಿ ದೇವರ ಬಳಿಕ ಆಂಜನೇಯನ ಮೊರೆ ಹೋಗುತ್ತೇವೆ.
ಇದು ಆಂಜನೇಯ ಕಾರ್ಯಸಿದ್ಧಿ ಮಂತ್ರವಾಗಿದ್ದು, ಜೀವನದಲ್ಲಿ ನಾವು ಅಂದುಕೊಂಡ ಕೆಲಸಗಳಾಗಬೇಕಾದರೆ ಕಾರ್ಯಸಿದ್ಧಿ ಆಂಜನೇಯ ಮಂತ್ರವನ್ನು ಪಠಿಸಬೇಕು. ಇದನ್ನು ತಪ್ಪದೇ ಪ್ರತಿನಿತ್ಯ ಪಠಿಸುವುದರಿಂದ ಉದ್ಯೋಗ, ವಿದ್ಯಾಭ್ಯಾಸದಲ್ಲಿ ಯಶಸ್ಸು ಸಾಧಿಸಬಹುದು.