ನಿಮ್ಮ ಎಲ್ಲಾ ಕೆಲಸಗಳಲ್ಲಿ ವಿಘ್ನ ಎದುರಾಗುತ್ತಿದೆಯೇ? ಹಾಗಾದ್ರೆ ಹೀಗೆ ಮಾಡಿ

ಸೋಮವಾರ, 27 ನವೆಂಬರ್ 2023 (14:16 IST)
ಕೆಲವರು ಎಲ್ಲಾ ಚೆನ್ನಾಗಿ ಇದ್ದರೂ ಮಾನಸಿಕ ಸಮಸ್ಯೆ ಇಂದ ಬಳಲುತ್ತಾರೆ.ಇನ್ನೂ ಕೆಲವರು ಹಣಕಾಸಿನ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ನರಳುತಿರುತ್ತಾರೆ. ಇವರೆಲ್ಲ ಎಷ್ಟೇ ಪ್ರಯತ್ನಿಸಿದರೂ ಪರಿಹಾರ ಮಾತ್ರ ಸಿಗುತ್ತಿರುವುದಿಲ್ಲ. ಇದೆಲ್ಲ ಸರ್ಪದೋಷ ದಿಂದ ಆಗುತ್ತದೆ. ಆದ್ದರಿಂದ ಈ ಸೂಚನೆಗಳು ನಿಮಲ್ಲಿ ಕಂಡುಬಂದರೆ ತಕ್ಷಣ ನಿಮ್ಮ ಜಾತಕ ತೋರಿಸಿ ಪರಿಹರಿಸಿಕೊಳ್ಳಿ.
 
ಜಾತಕದಲ್ಲಿ ಸರ್ಪದೋಷವಿದ್ದವರು ಜೀವನದಲ್ಲಿ ಏಳಿಗೆ ಕಾಣುವುದಿಲ್ಲ. ಅಂತವರು ತಕ್ಷಣ ಆ ಸರ್ಪದೋಷವನ್ನು ಪರಿಹರಿಸಿಕೊಳ್ಳಬೇಕಾಗುತ್ತದೆ. ನಿಮಗೆ ಸರ್ಪದೋಷವಿದ್ದಯೇ ಎಂಬುದನ್ನು  ಈ ಸೂಚನೆಗಳಿಂದ ತಿಳಿಯಬಹುದು.
 
ಕೆಲವರಿಗೆ ಎಷ್ಟೇ ಪ್ರಯತ್ನಪಟ್ಟರೂ ಕಂಕಣ ಭಾಗ್ಯ ಒದಗಿ ಬರುವುದಿಲ್ಲ. ಎಷ್ಟೇ ವಿದ್ಯಾವಂತರಾಗಿದ್ದರು, ರೂಪವಂತರಾಗಿದ್ದರು ಮದುವೆ ಆಗುವುದಿಲ್ಲ. ಇನ್ನೂ ಕೆಲವರಿಗೆ ಚರ್ಮ ಸಂಬಂಧದ ಕಾಯಿಲೆಗಳು ಬಾಧಿಸುತ್ತವೆ. ಯಾವುದೇ ವೈದ್ಯರ ಬಳಿ ಹೋದರೂ ಗುಣವಾಗುವುದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ