ಮನೆಯ ಆವರಣದಲ್ಲಿ ಶಮಿ ವೃಕ್ಷವಿದ್ದರೆ ಈ ಎಲ್ಲಾ ಫಲ ನಿಮ್ಮದಾಗಲಿದೆ

Krishnaveni K

ಸೋಮವಾರ, 6 ಮೇ 2024 (10:58 IST)
Photo Courtesy: Twitter
ಬೆಂಗಳೂರು: ಹಿಂದೂ ಪರಂಪರೆಯಲ್ಲಿ ಶಮಿ ವೃಕ್ಷಕ್ಕೆ ಅದರದ್ದೇ ಆದ ಪ್ರಾಮುಖ್ಯತೆಯಿದೆ. ಶಮಿ ವೃಕ್ಷವನ್ನು ಪೂಜಿಸುವುದರಿಂದ ದೋಷ ಪರಿಹಾರವೂ ಆಗುತ್ತದೆ. ಮನೆಯ ಆವರಣದಲ್ಲೇ ಶಮಿ ವೃಕ್ಷ ನೆಟ್ಟು ಪೂಜೆ ಮಾಡುವುದರಿಂದ ಯಾವ ಫಲಗಳಿವೆ ನೋಡೋಣ.

ಮನೆಯಲ್ಲಿ ಶಮಿ ವೃಕ್ಷವನ್ನು ನೆಟ್ಟು ಪೂಜಿಸುವುದರಿಂದ ಸಕಾರಾತ್ಮಕ ಅಭವೃದ್ಧಿಯಾಗುತ್ತದೆ. ಜೊತೆಗೆ ಮನೆಯಲ್ಲಿ ಶಾಂತಿ, ಸಮಾಧಾನ ನೆಲೆಸುತ್ತದೆ. ಹಿಂದೂ ಧರ್ಮದ ಪ್ರಕಾರ ಶಮಿ ವೃಕ್ಷಕ್ಕೂ ತುಳಸಿ ಗಿಡದಷ್ಟೇ ಪ್ರಾಮುಖ್ಯತೆಯಿದೆ. ಇದು ಅಷ್ಟೇ ಪವಿತ್ರ ಗಿಡಗಳಲ್ಲಿ ಒಂದಾಗಿದೆ.

ಶನಿ ದೇವನು ಇಷ್ಟಪಡುವ ಸಸ್ಯಗಳಲ್ಲಿ ಶಮಿ ವೃಕ್ಷವೂ ಒಂದು. ನಮ್ಮ ಕರ್ಮಗಳಿಗೆ ಅನುಸಾರವಾಗಿ ಫಲವನ್ನು ಕೊಡುವ ಶನಿ ದೇವನು ಜೀವನದಲ್ಲಿ ಅನೇಕ ಏಳು-ಬೀಳುಗಳಿಗೆ ಕಾರಣನಾಗುತ್ತಾನೆ. ಶನಿ ದೋಷ ಪರಿಹಾರಕ್ಕೆ ಶಮಿ ವೃಕ್ಷವನ್ನು ಪೂಜೆ ಮಾಡಿದರೆ ಒಳಿತು.

ಮನೆಯ ಮುಖ್ಯ ದ್ವಾರದ ಬಲಭಾಗದಲ್ಲಿ ಶಮಿ ವೃಕ್ಷವಿದ್ದರೆ ಅದು ನಮಗೆ ಒಳಿತು ಮಾಡುತ್ತದೆ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಬದಲಾವಣೆಗಳಾಗಿ ಶನಿ, ರಾಹುವಿನ ದೋಷಗಳಿಂದ ನಮ್ಮ ಮೇಲಾಗುವ ದೋಷ, ಪರಿಣಾಮಗಳು ಕಡಿಮೆಯಾಗುತ್ತವೆ ಎಂಬುದು ನಂಬಿಕೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ