ಹೋಟೆಲ್ ಗಳಲ್ಲಿ ವ್ಯವಹಾರ ಉತ್ತಮವಾಗಿರಲು ಈ ದಿಕ್ಕಿನಲ್ಲಿ ದೇವರ ಕೋಣೆ ನಿರ್ಮಿಸಿ

ಶನಿವಾರ, 6 ಫೆಬ್ರವರಿ 2021 (06:31 IST)
ಬೆಂಗಳೂರು : ಸಾಮಾನ್ಯವಾಗಿ ಮನೆಯಲ್ಲಿದೇವರ ಪೂಜಾ ಕೋಣೆ  ಇರುತ್ತದೆ. ಅದೇರೀತಿ ಆಸ್ಪತ್ರೆ, ಹೋಟೆಲ್, ಕಚೇರಿ ಮುಂತಾದ ಕಡೆ ಕೂಡ ದೇವರ ಪೂಜೆಗೆಂದು ಒಂದು ಸ್ಥಳವನ್ನು ಮೀಸಲಿಡುತ್ತಾರೆ. ಹಾಗಾದರೆ ಹೋಟೆಲ್ ನಿರ್ಮಿಸುವಾಗ ದೇವರ ಪೂಜಾ ಸ್ಥಳವನ್ನು ಯಾವ ದಿಕ್ಕಿನಲ್ಲಿ ನಿರ್ಮಿಸಿದರೆ ವ್ಯವಹಾರ ಉತ್ತಮವಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಹೋಟೆಲ್ ಗಳಲ್ಲಿ ಪೂಜಾ ಸ್ಥಳವನ್ನು ನಿರ್ಮಿಸಿದರೆ ಅದರಿಂದ ಅಲ್ಲಿ ಧನಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ, ನಕರಾತ್ಮಕ ಶಕ್ತಿಗಳು ದೂರವಾಗುತ್ತದೆ. ಹಾಗಾಗಿ ವಾಸ್ತುಶಾಸ್ತ್ರದ ಪ್ರಕಾರ ಪೂಜಾ ಸ್ಥಳವನ್ನು ಈಶಾನ್ಯ ದಿಕ್ಕಿನಲ್ಲಿ ನಿರ್ಮಿಸಿದರೆ ಉತ್ತಮ. ಯಾಕೆಂದರೆ ಈಶಾನ್ಯ ದಿಕ್ಕನ್ನು ದೇವರ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಇದರಿಂದ ವ್ಯವಹಾರದಲ್ಲಿ ಅಭಿವೃದ್ಧಿಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ