ಊರಿನ ಗ್ರಾಮದೇವತೆಯ ಪೋಟೊವನ್ನು ಮನೆಯಲ್ಲಿಟ್ಟು ಪೂಜಿಸಬಹುದೇ?
ಶುಕ್ರವಾರ, 17 ಏಪ್ರಿಲ್ 2020 (06:53 IST)
ಬೆಂಗಳೂರು : ಮನೆಯಲ್ಲಿ ದೇವರ ಪೋಟೊವನ್ನಿಟ್ಟು ಪೂಜೆ ಮಾಡುತ್ತೇವೆ. ಆದರೆ ಊರನ್ನು ಕಾಯುವ ಗ್ರಾಮದೇವತೆಯ ಫೋಟೊವನ್ನು ಮನೆಯಲ್ಲಿಟ್ಟು ಪೂಜೆ ಮಾಡಬಹುದೇ ಎಂಬ ವಿಚಾರದಲ್ಲಿ ಗೊಂದಲವಿದೆ. ಅದಕ್ಕೆ ಉತ್ತರ ಇಲ್ಲಿದೆ.
ಗ್ರಾಮದೇವತೆಯ ಫೋಟೊವನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದು ಸೂಕ್ತವಲ್ಲ. ಯಾಕೆಂದರೆ ಮನೆಯಲ್ಲಿ ಪೂಜೆ ಮಾಡುವಾಗ ನಾವು ದೇವರಿಗೆ ತೆಂಗಿನಕಾಯಿ ಹಾಗೂ ಬಾಳೆಹಣ್ಣನ್ನು ನೈವೇದ್ಯವಾಗಿ ಇಡುತ್ತೇವೆ. ಆದರೆ ಗ್ರಾಮದೇವತೆ ಭೋಜನಪ್ರಿಯೆ ಆಗಿರುವುದರಿಂದ ಆಕೆಗೆ ಭೋಜನವನ್ನು ನೈವೇದ್ಯಗಿಡಬೇಕು. ಆದರೆ ಇದನ್ನು ಪ್ರತಿದಿನ ಇಡಲು ಸಾಧ್ಯವಾಗುವುದಿಲ್ಲವಾದ್ದರಿಂದ ಗ್ರಾಮದೇವತೆಯ ಫೋಟೊ ಮನೆಯಲ್ಲಿಟ್ಟು ಪೂಜೆ ಮಾಡುವುದು ಸೂಕ್ತವಲ್ಲ.