ದೀಪಾವಳಿ ಸಂದರ್ಭದಲ್ಲಿ ಗೋ ಪೂಜೆ ಮಾಡುವುದು ವಾಡಿಕೆ. ಅದರಲ್ಲೂ ಈ ವರ್ಷ ಈ ಕೆಲವು ರಾಶಿಯವರು ಗೋ ಪೂಜೆ ಮಾಡುವುದು ಶ್ರೇಯಸ್ಕರವಾಗಿದೆ. ಯಾವೆಲ್ಲಾ ರಾಶಿಯವರು ಇಲ್ಲಿದೆ ವಿವರ.
ವಿಶೆಷವಾಗಿ ಇಂದು ದೀಪಾವಳಿ ಸಂದರ್ಭದಲ್ಲಿ ಗೋ ಪೂಜೆ ಮಾಡಲಾಗುತ್ತದೆ. ವೃಷಭ, ಕರ್ಕಟಕ ಮತ್ತು ಕನ್ಯಾ ರಾಶಿಯವರು ವಿಶೇಷವಾಗಿ ಈ ವರ್ಷ ಗೋ ಪೂಜೆ ತಪ್ಪದೇ ಮಾಡಿ. ಅದರಲ್ಲೂ ಪೂಜೆ ಮಾಡುವಾಗ ಗೋ ಮಾತೆಯ ಯಾವ ಉತ್ಪನ್ನವನ್ನು ಇಟ್ಟು ಪೂಜೆ ಮಾಡಬೇಕು ನೋಡಿ.
ವೃಷಭ: ಈ ರಾಶಿಯವರ ಅಧಿಪತಿ ಶುಕ್ರ. ಹೀಗಾಗಿ ಈ ರಾಶಿಯವರು ಲಕ್ಷ್ಮೀ ಪೂಜೆ ಮಾಡುವಾಗ ದನದ ತುಪ್ಪದ ದೀಪವನ್ನು ಹಚ್ಚಿ ಪೂಜೆ ಮಾಡಿ. ಇದರಿಂದ ಐಶ್ವರ್ಯ ಪ್ರಾಪ್ತಿಯಾಗುತ್ತದೆ.
ಕರ್ಕಟಕ: ದೀಪಾವಳಿ ದಿನ ಶಿವಲಿಂಗಕ್ಕೆ ಗೋವಿನ ಹಾಲಿನ ಕ್ಷೀರಾಭಿಷೇಕ ಮಾಡಿಸಿ. ಇದರಿಂದ ಶಾಂತಿ, ಸಮೃದ್ಧಿ ಸಿಗುವುದು.
ಕನ್ಯಾ: ಗೋವುಗಳಿಗೆ ಹಸಿ ಹುಲ್ಲಿನ ಮೇವು ನೀಡಿ.ಇದರಿಂದ ಮನೆಯಲ್ಲಿ ಶಾಂತಿ, ಸಮೃದ್ಧಿ ಜೊತೆಗೆ ಸಂಬಂಧ ವೃದ್ಧಿಯಾಗುವುದು.