ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮೀ ಚಾಲೀಸಾ ಮಂತ್ರವನ್ನು ಪಠಿಸಿದರೆ ಈ ಲಾಭವಾಗುವುದು

Krishnaveni K

ಶುಕ್ರವಾರ, 1 ನವೆಂಬರ್ 2024 (08:42 IST)
ಬೆಂಗಳೂರು: ದೀಪಾವಳಿ ಹಬ್ಬ ಎಂದರೆ ಲಕ್ಷ್ಮೀ ದೇವಿಯನ್ನು ಆರಾಧಿಸುವ ಹಬ್ಬವಾಗಿದೆ. ಅಂಧಕಾರವನ್ನು ಹೋಗಲಾಡಿಸಿ ಬೆಳಕನ್ನು ಪರಸರಿಸುವ ಹಬ್ಬವಾಗಿದೆ. ಈ ಸಂದರ್ಭದಲ್ಲಿ ಲಕ್ಷ್ಮೀ ಚಾಲೀಸಾ ಮಂತ್ರವನ್ನು ತಪ್ಪದೇ ಹೇಳಿ.

ಹನುಮಾನ್ ಚಾಲೀಸಾ ಮಂತ್ರ ನಿಮಗೆಲ್ಲಾ ಪರಿಚಿತ. ಅದೇ ರೀತಿ ಲಕ್ಷ್ಮೀ ಚಾಲೀಸಾ ಮಂತ್ರ ಕೂಡಾ ಅಷ್ಟೇ ಪವರ್ ಫುಲ್. ಲಕ್ಷ್ಮೀ ಚಾಲೀಸಾ ಮಂತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಎಲ್ಲಾ ರೀತಿಯ ಯಶಸ್ಸು ಪಡೆಯಲಿದ್ದೀರಿ. ಇದನ್ನು ಕೇವಲ ಶುಕ್ರವಾರದಂದೇ ಓದಬೇಕೆಂದೇನಿಲ್ಲ. ಯಾವುದೇ ದಿನ ಓದಿದರೂ ಲಕ್ಷ್ಮೀ ಕೃಪಾಕಟಾಕ್ಷ ದೊರೆಯುವುದು.

ಬೆಳಿಗ್ಗೆ ಅಥವಾ ಮುಸ್ಸಂಜೆ ಹೊತ್ತು ಸ್ನಾನ ಮಾಡಿ ಮಡಿಯಲ್ಲಿ ಕೆಂಪು ಬಣ್ಣದ ವಸ್ತ್ರದ ಮೇಲೆ ಕುಳಿತು ಈ ಮಂತ್ರವನ್ನು ಪಠಿಸುವುದು ಸರಿಯಾದ ಕ್ರಮವಾಗಿದೆ. ಈ ಮಂತ್ರವನ್ನು ಓದುವಾಗ ಮಧ್ಯೆ ಎದ್ದು ಬೇರೆ ಕೆಲಸದಲ್ಲಿ ತೊಡಗಿಸುವುದು, ಎದ್ದು ಹೋಗುವುದು ಇತ್ಯಾದಿ ಮಾಡಬಾರದು. ಒಮ್ಮೆ ಓದಲು ಕೂತರೆ ಪೂರ್ತಿ ಓದಿಯೇ ಏಳಬೇಕು.

ದೇವಿಯ ಫೋಟೋ ಅಥವಾ ವಿಗ್ರಹವನ್ನು ಎದುರು ಇಟ್ಟುಕೊಂಡು ಕುಂಕುಮಾರ್ಚನೆ ಮಾಡುತ್ತಾ ಈ ಮಂತ್ರ ಹೇಳಿದರೆ ಒಳಿತಾಗುತ್ತದೆ. ವಿಶೇಷವಾಗಿ ಎಲ್ಲಾ ಮಂತ್ರವನ್ನು ಪಠಿಸಿದ ಬಳಿಕ ಅಂತಿಮವಾಗಿ ದೇವಿಗೆ ಆರತಿ ಬೆಳಗಿದರೆ ಮಂತ್ರದ ಪೂರ್ಣ ಫಲ ನಿಮಗೆ ದೊರೆತಂತಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ