ಯಶಸ್ಸು ಸಿಗಬೇಕೆಂದರೆ ದೀಪ ಹಚ್ಚುವಾಗ ಈ ಮಂತ್ರ ಪಠಿಸಿ

Krishnaveni K

ಮಂಗಳವಾರ, 29 ಅಕ್ಟೋಬರ್ 2024 (08:35 IST)
Photo Credit: Freepik
ಬೆಂಗಳೂರು: ದೀಪ ಹಚ್ಚುವ ಪ್ರಕ್ರಿಯೆ ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಪವಿತ್ರವಾದ ವಿಚಾರವಾಗಿದೆ. ದೀಪ ಬೆಳಕಿನ, ಶುಭದ ಸಂಕೇತ. ಅದರಲ್ಲೂ ದೀಪ ಹಚ್ಚುವಾಗ ಈ ಮಂತ್ರ ಹೇಳಿ ಹಚ್ಚಿದರೆ ಯಶಸ್ಸು ಸಾಧಿಸಬಹುದು.
 

ದೇವರ ಮನೆಯಲ್ಲಿ ಇರಲಿ, ಯಾವುದೇ ಕಾರ್ಯಕ್ರಮದ ಆರಂಭದಲ್ಲಿರಲಿ, ದೀಪ ಬೆಳಗಿ ಮುನ್ನಡೆಯುತ್ತೇವೆ. ಯಾಕೆಂದರೆ ದೀಪ ಬೆಳಗುವುದರ ಮೂಲಕ ನಾವು ಆರಂಭಿಸುವ ಕೆಲಸದಲ್ಲಿ ಯಶಸ್ಸು ಸಿಗಲಿ ಎಂದು ಬೇಡಿಕೊಳ್ಳುತ್ತೇವೆ. ದೀಪ ಹಚ್ಚುವಾಗ ದೇವರನ್ನು ಭಕ್ತಿಯಿಂದ ನೆನೆಸಿಕೊಳ್ಳುವುದರ ಜೊತೆಗೆ ಈ ಒಂದು ಮಂತ್ರವನ್ನು ತಪ್ಪದೇ ಪಠಿಸಿ. ಅದು ಹೀಗಿದೆ:

ದೀಪಜ್ಯೋತಿಃ ಪರಬ್ರಹ್ಮಃ
ದೀಪಜ್ಯೋತಿಃ ಜನಾರ್ಧನಃ
ದೀಪೋಹರ್ತಿಮೇ ಪಾಪಂ ಸಂಧ್ಯಾದೀಪಂ ನಮೋಸ್ತುತೇ
ಶುಭಂ ಕರೋತು ಕಲ್ಯಾಣಮಾರೋಗ್ಯಂ ಸುಂಖ ಸಂಪದಾಂ
ಶತ್ರುವೃದ್ಧಿ ವಿನಾಶಂ ದೀಪಜ್ಯೋತಿಃ ನಮೋಸ್ತುತೇ

ಮನೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಎರಡೂ ಹೊತ್ತು ದೀಪ ಹಚ್ಚುವುದರಿಂದ ಶುಭವುಂಟಾಗುತ್ತದೆ. ಯಾವುದೇ ಶುಭ ಕೆಲಸಕ್ಕೆ ಮುನ್ನ ದೀಪ ಹಚ್ಚಿ ಈ ಪ್ರಾರ್ಥನೆ ಮಾಡುವುದರಿಂದ ಯಶಸ್ಸು ನಿಮ್ಮದಾಗುತ್ತದೆ. ಸೂರ್ಯೋದಯದ ಸಂದರ್ಭದಲ್ಲಿ ದೀಪ ಬೆಳಗಿ ಮಂಗಳಾರತಿ ಮಾಡಿದರೆ ಸಕಾರಾತ್ಮಕ ಶಕ್ತಿ ಪಡೆಯುತ್ತೀರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ