ರಾಶಿಗನುಗುಣವಾಗಿ ವಾಹನಗಳ ಬಣ್ಣವನ್ನು ಆಯ್ಕೆ ಮಾಡಿ

ಬುಧವಾರ, 28 ನವೆಂಬರ್ 2018 (14:03 IST)
ಬೆಂಗಳೂರು : ವಾಹನಗಳನ್ನು ಖರೀದಿಸುವಾಗ ರಾಶಿಗಳಿಗನುಗುಣವಾಗಿ ಕಾರನ್ನು ಖರೀದಿಸಿದರೆ ಒಳ್ಳೆಯದು. ಇಲ್ಲವಾದರೆ ಕೆಲವೊಮ್ಮೆ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಿಮ್ಮ ರಾಶಿಗನುಗುಣವಾಗಿ ವಾಹನನ್ನು ಖರೀದಿಸಿ.


ಮೇಷ : ಕಿತ್ತಳೆ ಮಿಶ್ರಿತ ಕೆಂಪು, ತಿಳಿಗೆಂಪು ಮತ್ತು ಕಡುಗೆಂಪು ವರ್ಣದ ವಾಹನಗಳನ್ನು ಖರೀದಿಸಿದರೆ ಒಳ್ಳೆಯದು. ಇವರ ಅಧಿಪತಿ ಕುಜ. ಕುಜನ ಬಣ್ಣ ಕೆಂಪು. ಮಂಗಳವಾರದಂದು ವಾಹನ ಖರೀದಿ ಶುಭ.


ವೃಷಭ : ಬಿಳಿ ಅಥವಾ ಹಸಿರು ವರ್ಣದ ವಾಹನ ಉತ್ತಮ. ರಾಶಿಯ ಅಧಿಪತಿ ಚಂದ್ರ. ಚಂದ್ರನಿಗೆ ಬಿಳಿ ಬಣ್ಣ ಇಷ್ಟ. ಸೋಮವಾರ ವಾಹನ ಖರೀದಿಗೆ ಪ್ರಾಶಸ್ತ್ಯ.


ಮಿಥುನ : ಹಸಿರು ವರ್ಣ ಒಳ್ಳೆಯದು. ಹಳದಿ ವರ್ಣದ ವಾಹನ ಇವರಿಗೆ ಅಷ್ಟೇನು ಒಳಿತನ್ನು ಮಾಡುವುದಿಲ್ಲ. ವಾಹನ ಖರೀದಿಗೆ ಬುಧವಾರ ಉತ್ತಮ.


ಕಟಕ : ಬಿಳಿ, ಬೂದು, ನೇರಳೆ, ಕಪ್ಪು ಬಣ್ಣದ ವಾಹನ ಖರೀದಿಸಬಹುದು. ರಾಶಿಯ ಅಧಿಪತಿ ಚಂದ್ರ. ಸೋಮವಾರ ಖರೀದಿಗೆ ಉತ್ತಮ.


ಸಿಂಹ : ಬಂಗಾರದ ಕೆಂಪು ಬಣ್ಣ, ಕಿತ್ತಳೆ ಬಣ್ಣ ಹಾಗೂ ನೇರಳೆ ಬಣ್ಣದ ವಾಹನವನ್ನು ಖರೀದಿಸಬಹುದು. ರಾಶಿಯ ಅಧಿಪತಿ ರವಿ. ಕೆಂಪು ಬಣ್ಣದ ಪ್ರಿಯ. ಭಾನುವಾರ ವಾಹನ ಖರೀದಿಸುವುದು ಒಳ್ಳೆಯದು.


ಕನ್ಯಾ : ನೀಲಿ ಬಣ್ಣದ ವಾಹನ ಖರೀದಿಸಬಹುದು. ರಾಶಿಯ ಅಧಿಪತಿ ಬುಧ. ಹಳದಿ ಬಣ್ಣದ ವಾಹನ ಖರೀದಿ ಒಳ್ಳೆಯದು.

ತುಲಾ : ತಿಳಿಗೆಂಪು ಕಿತ್ತಳೆ ವರ್ಣ ಪ್ರಿಯರು. ಕೆಂಪು ಬಣ್ಣವು ಇವರಿಗೆ ಫೇವರಿಟ್‌. ಖರೀದಿಗೆ ಶುಕ್ರವಾರ ಶುಭವಾರ.


ವೃಶ್ಚಿಕ : ಗಾಢ ಕೆಂಪು ಬಣ್ಣ, ಕಂದು ಮಿಶ್ರಿತ ಬಣ್ಣದ ವಾಹನವನ್ನು ಆಯ್ಕೆ ಮಾಡಿಕೊಳ್ಳಬಹುದು. ರಾಶಿಯ ಅಧಿಪತಿ ಕುಜ.


ಧನಸ್ಸು : ಹಳದಿ, ಕೆಂಪು ಮಿಶ್ರಿತ ಹಳದಿ ಬಣ್ಣದ ವಾಹನ ಖರೀದಿಸಬಹುದು. ರಾಶಿಯ ಅಧಿಪತಿ ಗುರು. ಗುರುವಾರ ವಾಹನ ಖರೀದಿ ಶುಭ.


ಮಕರ: ನೀಲಿ, ಕೃಷ್ಣ ನೀಲಿ, ಹಳದಿ ಮಿಶ್ರಿತ ನೀಲ ವರ್ಣದ ವಾಹನ ಖರೀದಿಸಬಹುದು. ರಾಶಿಯ ಅಧಿಪತಿ ಶನಿ. ಶನಿವಾರ ವಾಹನ ಖರೀದಿ ಉತ್ತಮ.


ಕುಂಭ : ಚಿನ್ನದ ಬಣ್ಣ, ಹಳದಿ ಮಿಶ್ರಿತ ಕೆಂಪು, ನೀಲಿ ಅಥವಾ ಕಪ್ಪು ಬಣ್ಣದ ವಾಹನ ಖರೀದಿಸಬಹುದು. ರಾಶಿಯ ಅಧಿಪತಿ ಶನಿ. ಶನಿವಾರ ಖರೀದಿಸಿದರೆ ಉತ್ತಮ.


ಮೀನ : ಹಳದಿ, ಹಳದಿ ಮಿಶ್ರಿತ ಕಿತ್ತಳೆ ಬಣ್ಣದ ವಾಹನ ಖರೀದಿಸಿದರೆ ಒಳ್ಳೆಯದು. ರಾಶಿಯ ಅಧಿಪತಿ ಗುರು. ಗುರುವಾರ ವಾಹನ ಖರೀದಿಸಿದರೆ ಒಳ್ಳೆಯದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ