ಯುವತಿಯ ಮೇಲೆ ಅತ್ಯಾಚಾರ ಆರೋಪ; ಸ್ಯಾಂಡಲ್ ವುಡ್ ನಟ, ಡ್ಯಾನ್ಸ್ ಮಾಸ್ಟರ್ ವಿರುದ್ಧ ದೂರು ದಾಖಲು
ಬುಧವಾರ, 28 ನವೆಂಬರ್ 2018 (07:18 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ, ಡ್ಯಾನ್ಸ್ ಮಾಸ್ಟರ್ ವಿರುದ್ಧ ಯುವತಿಯೊಬ್ಬಳು ಅತ್ಯಾಚಾರದ ಆರೋಪ ಮಾಡಿದ್ದಾಳೆ.
ಗೂಳಿಹಟ್ಟಿ ಚಿತ್ರದ ಸಹನಟ ಕರಣ್ ಮಹಾದೇವ್ ಅಲಿಯಾಸ್ ಮಂಜುನಾಥ್ ಎಂಬಾತನ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಈತ ಯುವತಿಯೊಬ್ಬಳಿಗೆ ಡ್ಯಾನ್ಸ್ ಕಲಿಸುತ್ತೇನೆ ಎಂದು ಹೇಳಿ ಆಕೆಯ ಸ್ನೇಹ ಬೆಳೆಸಿ ಬಳಿಕ ಅತ್ಯಾಚಾರ ಎಸಗಿದ್ದಾನೆ.
ಇಷ್ಟಕ್ಕೆ ಸುಮ್ಮನಾಗದ ಈತ ಆಕೆಗೆ ಮದುವೆ ನಿಶ್ಚಯವಾದ ಮೇಲೂ ಆಕೆಗೆ ಬೆದರಿಕೆಯೊಡ್ಡಿ ಮತ್ತೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಗರ್ಭಿಣಿಯಾದ ಆಕೆಗೆ ಗರ್ಭಪಾತ ಕೂಡ ಮಾಡಿಸಿದ್ದಾನೆ. ಈ ಘಟನೆಯಿಂದ ನೊಂದ ಯುವತಿ ಆತನಿಂದ ದೂರವಾಗಿದ್ದಕ್ಕೆ ಆಕೆ ಮದುವೆಯಾಗುವ ಹುಡುಗನಿಗೆ ಆತ ಆಕೆಯ ಜೊತೆಗಿದ್ದ ವಿಡಿಯೋ ತೋರಿಸಿ ಆಕೆಯ ಮದುವೆಯನ್ನು ಮುರಿಯುವಂತೆ ಮಾಡಿದ್ದಾನೆ.
ಆದಕಾರಣ ಇದೀಗ ಯುವತಿ ಈ ಕುರಿತು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆತನ ವಿರುದ್ಧ ಸೂಕ್ತ ಕ್ರಮಕೊಳ್ಳಬೇಕು ಎಂದು ಮನವಿ ಮಾಡಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.