ಕಳಸಕ್ಕೆ ಸಿಂಗಾರ ಮಾಡಿದರೆ ಲಕ್ಷ್ಮೀ ದೇವಿ ಒಲಿಯುತ್ತಾಳಂತೆ!

ಶನಿವಾರ, 3 ಮಾರ್ಚ್ 2018 (07:24 IST)
ಬೆಂಗಳೂರು: ದೀಪಾವಳಿ ಹಬ್ಬದಂದು ಕಳಸಕ್ಕೆ ವಿಶೇಷ ಪೂಜೆ ಮಾಡುತ್ತಾರೆ. ಲಕ್ಷ್ಮಿ ಪೂಜೆಯೇ ಹೆಚ್ಚು ಪ್ರಾಶಸ್ತ್ರವಾಗಿದೆ. ಲಕ್ಷ್ಮಿದೇವಿಯನ್ನು ಒಲಿಸಿಕೊಂಡರೆ ಮನೆಯಲ್ಲಿ ಸಂಪತ್ತು ವೃದ್ಧಿಯಾಗುವುದು ಎಂಬ ನಂಬಿಕೆ.


ಲಕ್ಷ್ಮಿಪೂಜೆಯೆಂದು ಇಡುವ ಕಳಸಕ್ಕೆ ಸಿಂಗಾರ ಮಾಡುವುದು ಒಂದು ಕಲೆ. ಕಳಸಕ್ಕೆ ಹೇಗೆ ಸಿಂಗಾರ ಮಾಡಬೇಕು ಎಂಬುದರ ಕುರಿತು ಇಲ್ಲಿದೆ ನೋಡಿ ಟಿಪ್ಸ್.


ಲಕ್ಷ್ಮಿ ಕಳಸವಿಡಲು ಪಂಚಲೋಹ, ಬೆಳ್ಳಿಯ ಕಳಸವನ್ನು ಆಯ್ಕೆ ಮಾಡಿ.

ನಂತರ ಕಳಸಕ್ಕೆ ನೂಲು ಸುತ್ತಿ, ಅರಿಶಿನದಿಂದ ತಿಲಕ, ಮೂಗು ಕಾಡಿಗೆಯಿಂದ ಕಣ್ಣು ಬರೆಯಿರಿ.

ಕಳಸದ ಕಂಠಕ್ಕೆ ಹೂವುಗಳಿಂದ ಅಲಂಕಾರ ಮಾಡಿ. ನೀರಿರುವ ತೆಂಗಿನಕಾಯಿ ಜುಟ್ಟು ಮೇಲೆ ಬರುವಂತೆ ಮಾಡಿ ಅದಕ್ಕೆ
ಅರಿಶಿಣ ಕುಂಕುಮ ಹಚ್ಚಿ. ಕಳಸಕ್ಕೆ ಮಾವಿನ ಎಲೆಗಳಿಂದ ಸಿಂಗಾರ ಮಾಡಿ.

ಕಳಸಕ್ಕೆ ಸೀರೆಯನ್ನು ಕೂಡ ಸುತ್ತಬಹುದು ಇದರಿಂದಲೂ ಕಳಸ ಚೆನ್ನಾಗಿ ಕಾಣುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ