ವಿದ್ಯಾರ್ಥಿಗಳು ಚೆನ್ನಾಗಿ ಓದಿ ಯಶಸ್ಸು ಕಾಣಲು ದಕ್ಷಿಣಾಮೂರ್ತಿಯನ್ನು ಈ ಮಂತ್ರದಿಂದ ಪೂಜಿಸಿ

ಶನಿವಾರ, 8 ಡಿಸೆಂಬರ್ 2018 (09:21 IST)
ಬೆಂಗಳೂರು : ಶಿವನಿಗೆ ಅನೇಕ ರೂಪಗಳಿವೆ. ಅದರಲ್ಲಿ ದಕ್ಷಿಣಾಮೂರ್ತಿಯ ಸ್ವರೂಪವು ಒಂದು. ದಕ್ಷಿಣಾಮೂರ್ತಿ ಜ್ಞಾನವನ್ನು, ಅರಿವನ್ನು ಮೂಡಿಸುವ ಪರಮ ಗುರು ಎನ್ನುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಜೀವನದಲ್ಲಿ ಯಶಸ್ಸು ಕಾಣಬೇಕೆಂದರೆ ದಕ್ಷಿಣಾಮೂರ್ತಿಯನ್ನು ಈ ಮಂತ್ರದಿಂದ ಪೂಜಿಸಬೇಕು.


ದಕ್ಷಿಣಾಮೂರ್ತಿಯ ಪೋಟೋವನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿಟ್ಟು “ಓಂ ದಕ್ಷಿಣಾಮುರ್ತಯೇಚ ವಿದ್ಮಹೇ ಧ್ಯಾನಸ್ಥಾಯ ಧೀಮಹಿ ತನ್ನೋ ಧಿಷಃ ಪ್ರಚೋದಯಾತ್“ ಮಂತ್ರದಿಂದ ಪೂಜಿಸಿದರೆ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಜೀವನದಲ್ಲಿ ಉನ್ನತಸ್ಥಾನವನ್ನು ಏರುತ್ತಾರೆ ಎಂದು ಶಾಸ್ತ್ರಗಳು ಹೇಳುತ್ತವೆ. ಅಲ್ಲದೇ ಮನೆಯಲ್ಲಿ ಪದೇಪದೇ ಅನಾರೋಗ್ಯ ಸಮಸ್ಯೆ, ಅಪಮೃತ್ಯ ದೋಷ ಸಹ ದೂರವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ