ಇಂದು ಸಿಎಂ ಕುಮಾರಸ್ವಾಮಿಯಿಂದ ರೈತರಿಗೆ ಋಣಮುಕ್ತ ಪತ್ರ ವಿತರಣೆ

ಶನಿವಾರ, 8 ಡಿಸೆಂಬರ್ 2018 (07:32 IST)
ಬೆಂಗಳೂರು : ಸಾಲಮನ್ನಾ ವಿಚಾರದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಇಂದು ಸಿಎಂ ಕುಮಾರಸ್ವಾಮಿ ಅವರು ದೊಡ್ಡಬಳ್ಳಾಪುರದಲ್ಲಿ ಹಾಗೂ ಸೇಡಂ  ತಾಲೂಕುಗಳಿಗೆ ಋಣಮುಕ್ತ ಪತ್ರ ವಿತರಣೆ ಮಾಡಲಿದ್ದಾರೆ.


ಮೊದಲ ಹಂತದಲ್ಲಿ 64000 ಕೋಟಿ ರೂ. ಮೊತ್ತದ ಋಣಮುಕ್ತ ಪತ್ರ ವಿತರಿಸಲಿದ್ದಾರೆ. ಹಾಗೇ ದೊಡ್ಡಬಳ್ಳಾಪುರದಲ್ಲಿ 17300 ಮಂದಿ ರೈತರಿಗೆ ಋಣಮುಕ್ತ ಪತ್ರ ನೀಡಲಿದ್ದಾರೆ.


ಈ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಅವರು, ‘ದೊಡ್ಡಬಳ್ಳಾಪುರದಲ್ಲಿ ಹಾಗೂ ಸೇಡಂ ನಲ್ಲಿ 17 ಲಕ್ಷ ರೈತರ ಸಾಲ ಮನ್ನಾ ಯೋಜನೆಗೆ ಚಾಲನೆ ನೀಡಲಾಗುವುದು, ಯಾವುದೇ ಕಾರಣಕ್ಕೂ ರೈತರು ದುಡುಕಿ ಆತ್ಮಹತ್ಯೆಯಂತಹ ಕೆಟ್ಟ ದಾರಿ ಹಿಡಿಯಬಾರದು ಎಂದು ಅವರು ಮನವಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ