ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಜ್ಯೋತಿಷಿಗಳು ಆಯುಶ್ಚ ಹೋಮ ಮಾಡಲು ಸೂಚನೆ ನೀಡುವುದು ಹೆಚ್ಚಾಗಿದೆ. ಅದೇ ರೀತಿ ಮೃತ್ಯುಂಜಯ ಹೋಮ ಮಾಡಲೂ ಹೇಳುತ್ತಾರೆ. ಆದರೆ ಇವೆರಡರ ನಡುವಿನ ವ್ಯತ್ಯಾಸವೇನು? ಯಾಕೆ ಮಾಡುತ್ತಾರೆ ಇಲ್ಲಿ ತಿಳಿದುಕೊಳ್ಳಿ.
ಆಯುಶ್ಚ ಹೋಮ
ಇದನ್ನು ಮಕ್ಕಳಿಗೆ ಮಾಡಲಾಗುತ್ತದೆ. ಮಗುವಿನ ಜಾತಕದಲ್ಲಿ ಆಯಸ್ಸು ಯೋಗ ಕ್ಷೀಣವಾಗಿದ್ದಾಗ ಆಯುಶ್ಚ ಹೋಮ ಮಾಡಲು ಜ್ಯೋತಿಷಿಗಳು ಸೂಚಿಸುತ್ತಾರೆ. ಆಯಶ್ಚರ ಹೋಮವನ್ನು ನಿರ್ದಿಷ್ಟ ವರ್ಷದವರೆಗೆ ವರ್ಷಕ್ಕೊಮ್ಮೆ ಮಾಡಲು ಸೂಚಿಸುತ್ತಾರೆ. ಅದರಂತೆ ಮಾಡಿದರೆ ಮಗುವಿನ ಆಯಸ್ಸು ವೃದ್ಧಿಯಾಗುತ್ತದೆ ಎಂಬುದು ನಂಬಿಕೆ. ಆಯಶ್ಚರ ಹೋಮದಲ್ಲಿ ಮುಖ್ಯವಾಗಿ ಸೂರ್ಯನನ್ನು ಕುರಿತು ಪ್ರಾರ್ಥನೆ ಮಾಡಲಾಗುತ್ತದೆ.
ಮೃತ್ಯುಂಜಯ ಹೋಮ
ಇದೂ ಕೂಡಾ ಸರ್ವೇಸಾಮಾನ್ಯವಾಗಿ ನಾವು ಕೇಳಿಬರುವಂತಹ ಹೋಮವೇ. ಆದರೆ ಆಯಶ್ಚರ ಹೋಮಕ್ಕೂ ಇದಕ್ಕೂ ಕೊಂಚವೇ ವ್ಯತ್ಯಾಸವಿದೆ. ಇದು ಎಲ್ಲಾ ವಯಸ್ಸಿನವರಿಗೂ ಮಾಡುವಂತಹ ಹೋಮವಾಗಿದೆ.
ಮೃತ್ಯುಂಜಯ ಹೋಮದಲ್ಲಿ ಮೃತ್ಯುಂಜಯನನ್ನು ಕುರಿತು ಸಂಕಲ್ಪ ಮಾಡಿಕೊಂಡು ಪ್ರಾರ್ಥನೆ ಮಾಡಲಾಗುತ್ತದೆ. ಒಬ್ಬ ವ್ಯಕ್ತಿಗೆ ಪದೇ ಪದೇ ಅನಾರೋಗ್ಯ ಕಾಡುತ್ತಿದ್ದರೆ, ಅನಾರೋಗ್ಯದ ಮುಖೇನ ಮರಣ ಭಯವಿದ್ದರೆ ಮೃತ್ಯುಂಜಯ ಹೋಮ ಮಾಡಲು ಸೂಚಿಸಲಾಗುತ್ತದೆ. ಜಾತಕದಲ್ಲಿ ಇಂತಹ ಸಮಸ್ಯೆಯಿದ್ದಾಗ ಹೋಮದ ಜೊತೆಗೆ ಪ್ರತಿನಿತ್ಯ ಮೃತ್ಯುಂಜಯ ಮಂತ್ರ ಜಪಿಸುವುದೂ ಉತ್ತಮ.