ಗುರು ಗ್ರಹದ ಅನುಗ್ರಹಕ್ಕಾಗಿ ಯಾವ ಮಂತ್ರ ಪಠಿಸಬೇಕು

Krishnaveni K

ಶುಕ್ರವಾರ, 31 ಮೇ 2024 (08:33 IST)
ಬೆಂಗಳೂರು: ಜಾತಕದಲ್ಲಿ ಗುರು ದೆಶೆಯಿದ್ದರೆ ಮದುವೆ, ಶುಭ ಕೆಲಸಗಳು, ಯಶಸ್ಸು ಎಲ್ಲವೂ ಸುಸ್ರೂತ್ರವಾಗಿ ನಡೆಯುತ್ತದೆ. ಆದರೆ ಗುರು ಗ್ರಹದ ಅನುಗ್ರಹಕ್ಕಾಗಿ ಏನು ಮಾಡಬೇಕು, ಯಾವ ಮಂತ್ರ ಪಠಿಸಬೇಕು ಎಂದು ಇಲ್ಲಿ ಓದಿ.

ಗುರು ಗ್ರಹ ಅತ್ಯಂತ ಪವರ್ ಫುಲ್ ಗ್ರಹವಾಗಿದ್ದು ಮದುವೆಯಿಂದ ಹಿಡಿದು, ಸಂತಾನ ಭಾಗ್ಯ, ಸಂಪತ್ತು  ವೃದ್ಧಿ, ವಿದ್ಯಾಭ್ಯಾಸದಲ್ಲಿ ಏಳಿಗೆ, ಮನೆ ಕಟ್ಟುವ ಯೋಗ ಇತ್ಯಾದಿ ಎಲ್ಲಾ ಕೆಲಸಗಳಿಗೂ ಗುರುಗ್ರಹದ ಅನುಗ್ರಹ ಬೇಕೇ ಬೇಕು.

ಒಂದು ವೇಳೆ ಗುರುವಿನ ಅನುಗ್ರಹವಿಲ್ಲದೇ ಹೋದರೆ ಮದುವೆಗೆ ಅಡೆತಡೆಗಳು, ಮಕ್ಕಳಾಗಲು ವಿಳಂಬ, ಸಂಪತ್ತು ನಷ್ಟ ಇತ್ಯಾದಿ ಕಷ್ಟ-ನಷ್ಟಗಳು ಬರಬಹುದು. ಇದಕ್ಕಾಗಿ ಗುರು ಗ್ರಹದ ಪೂಜೆ ಮಾಡುವುದು ಅಗತ್ಯ.

ಗುರು ಗ್ರಹದ ಅನುಗ್ರಹ ಪಡೆಯಬೇಕಾದರೆ ಪ್ರತಿನಿತ್ಯ ‘ಓಂ ಗ್ರಾಂ ಗ್ರೀಂ ಗ್ರೌಂ ಸಃ ಗುರುವೇ ನಮಃ’ ಎಂಬ ಮಂತ್ರವನ್ನು ಪಠಿಸಬೇಕು. ಇದಲ್ಲದೆ ಹೋದರೆ ಓಂ ಬ್ರಿಂ ಬೃಹಸ್ಪತಯೇ ನಮಃ ಎಂಬ ಮಂತ್ರವನ್ನು ಪ್ರತಿನಿತ್ಯ ಜಪಿಸಿ ಗುರುವಿನ ಅನುಗ್ರಹಕ್ಕೆ ಪಾತ್ರರಾಗಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ