ರಸ್ತೆಯಲ್ಲಿ ಸಿಗುವ ಈ ಮೂರು ವಸ್ತುಗಳನ್ನು ಅಪ್ಪಿತಪ್ಪಿಯೂ ಮನೆಗೆ ತರಬೇಡಿ!

ಶನಿವಾರ, 25 ಆಗಸ್ಟ್ 2018 (07:16 IST)
ಬೆಂಗಳೂರು : ಮಕ್ಕಳು ಆಟವಾಡಲು ಹೊರಗೆ ಹೋದಾಗ ಕೆಲವೊಮ್ಮೆ ರಸ್ತೆಯಲ್ಲಿ ಸಿಗುವ ವಸ್ತುಗಳನ್ನು ಮನೆಗೆ ತರುತ್ತಾರೆ. ಹಾಗೆ ಮಕ್ಕಳು ತರುವ ವಸ್ತುಗಳಲ್ಲಿ ಮೂರೂ ವಸ್ತುಗಳು ತುಂಬಾ ಅಪಾಯಕಾರಿಯಂತೆ, ಆ ಮೂರೂ ಅಪಾಯಕಾರಿಯಾದ ವಸ್ತುಗಳು ಯಾವುದು ಎಂಬುದು ಇಲ್ಲಿದೆ ನೋಡಿ.


*ಗೊಂಬೆಗಳು, ಹೌದು ಕೆಲವೊಮ್ಮೆ ಮಕ್ಕಳು ಆಟವಾಡಲು ಹೊರಗೆ ಹೋದಾಗ ಅವರಿಗೆ ಗೊಂಬೆಗಳು ದೊರಕುತ್ತದೆ, ಮಕ್ಕಳು ಅವುಗಳನ್ನ ಮನೆಗೆ ತಂದು ತಮ್ಮ ಗೊಂಬೆಗಳೊಂದಿಗೆ ಸೇರಿಸಿಕೊಳ್ಳುತ್ತಾರೆ. ಅಸಲಿಗೆ ಕೆಲವು ಮಾತ್ರಿಕರು ಗೊಂಬೆಗಳನ್ನ ಮಾಟ ಮಾಡಿ ರಸ್ತೆಯ ಪಕ್ಕದಲ್ಲಿ ಬಿಸಾಡಿರುವ ಸಾಧ್ಯತೆಗಳು ಇರುತ್ತದೆ, ಇಂತಹ ಗೊಂಬೆಗಳನ್ನ ಮನೆಯಲ್ಲಿ ಇರಿಸಿಕೊಳ್ಳುವುದರಿಂದ ಕೆಟ್ಟ ಶಕ್ತಿಗಳು ಮನೆಯಲ್ಲಿ ನೆಲೆಯೂರುತ್ತದೆ, ಇದರಿಂದ ಮನೆಮಂದಿಗೆ ಅಪಾಯವಾಗುವ ಸಾಧ್ಯತೆ ಇರುತ್ತದೆ.

*ಇನ್ನು ಕೂದಲು, ಮಕ್ಕಳು ಆಟವಾಡುವಾಗ ಕೆಲವೊಮ್ಮೆ ಗಾಳಿಯಲ್ಲಿ ತೇಲಿಬರುವ ಕೂದಲುಗಳು ಗೊಂಬೆಯೊಂದಿಗೆ ಮನೆಯೊಳಗೇ ಬರುತ್ತದೆ. ಸಾಮಾನ್ಯವಾಗಿ ಭಾನಾಮತಿ ಮಾಟ ಮಾಡುವವರು ಕೂದಲನ್ನ ಉಪಯೋಗಿಸಿರಬಹುದು, ಅಂತಹ ಕೂದಲನ್ನ ಮನೆಯಲ್ಲಿ ಇರಿಕೊಳ್ಳುವುದು ಒಳ್ಳೆಯದಲ್ಲ.

*ನಿಂಬೆ ಹಣ್ಣು, ನಾವು ಮನೆಯಲ್ಲಿ ನಿಂಬೆ ಹಣ್ಣನ್ನ ಉಪಯೋಗ ಮಾಡುತ್ತೇವೆ ಅದೇ ರೀತಿ ಮಾಟ ಮಾಡುವವರಿಗೂ ಕೂಡ ನಿಂಬೆ ಹಣ್ಣು ಅತಿ ಅವಶ್ಯಕವಾಗಿ ಬೇಕಾಗುತ್ತದೆ. ಕೆಲವೊಮ್ಮೆ ಮಾಟ ಮಾಡಿದ ನಿಂಬೆ ಹಣ್ಣನ್ನ ರಸ್ತೆ ಬದಿಯಲ್ಲಿ ಬಿಸಾಕಿಡುತ್ತಾರೆ ಆಗ ಆಟವಾಡುವ ಮಕ್ಕಳು ಇದು ನಮ್ಮ ಮನೆಯ ನಿಂಬೆ ಹಣ್ಣು ಎಂದು ಮನೆಗೆ ತಗೆದುಕೊಂಡು ಬಂದರೆ ಅದರಿಂದ ಅಪಾಯ ಕಟ್ಟಿಟ್ಟ ಬುತ್ತಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ