ನೀವು ಬಳಸುವ ಬಾತ್ ಸೋಪ್ ಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಸೋಪ್ ಯಾವುದು ಗೊತ್ತಾ?

ಶುಕ್ರವಾರ, 24 ಆಗಸ್ಟ್ 2018 (07:19 IST)
ಬೆಂಗಳೂರು : ಜನರು ಬಳಸುವ ಬಾತ್ ಸೋಪ್ ಗಳಲ್ಲಿ ಹಿಂದೂಸ್ತಾನ್ ಯೂನಿಲಿವರ್ ನ ಸೋಪ್ ಲೈಫ್ ಬಾಯ್ ಮೊದಲ ಸ್ಥಾನ ಪಡೆದುಕೊಂಡಿದೆ.


ಈ ಹಿಂದೆ ದೇಶದ ನಂಬರ್ ಒನ್ ಸ್ಥಾನದಲ್ಲಿದ್ದ ಲಕ್ಸ್ ಈಗ ಮೂರನೇ ಸ್ಥಾನಕ್ಕೆ ಕುಸಿದಿದೆ. ಲಕ್ಸ್ ಹಿಂದಿಕ್ಕಿರುವ ವಿಪ್ರೋ ಬ್ರ್ಯಾಂಡ್ ಸಂತೂರ್ ಸೋಪ್ ಎರಡನೇ ಸ್ಥಾನದಲ್ಲಿದೆ. IMRB ಹೌಸ್ಹೋಲ್ಡ್ ಪ್ಯಾನೆಲ್ ಅಂಕಿ-ಅಂಶದ ಪ್ರಕಾರ, ಈ ಹಿಂದೆ ಲಕ್ಸ್ ಎರಡನೇ ಸ್ಥಾನದಲ್ಲಿತ್ತು. ಆದರೆ ಜೂನ್ ನಲ್ಲಿ ಸಂತೂರ್ ಸೋಪ್ ಮಾರಾಟದಲ್ಲಿ ಏರಿಕೆ ಕಂಡು ಬಂದ ಕಾರಣ ಲಕ್ಸ್ ಈಗ ಮೂರನೇ ಸ್ಥಾನಕ್ಕೆ ಕುಸಿದಿದೆ. 


ಮಾರುಕಟ್ಟೆ ಯಲ್ಲಿ ಶೇಕಡಾ 14.9ರಷ್ಟು ಪಾಲನ್ನು ಸಂತೂರ್ ಹೊಂದಿದ್ದರೆ ಲೈಫ್ ಬಾಯ್ ಶೇಕಡಾ 18.7 ರಷ್ಟು ಪಾಲನ್ನು ಹೊಂದಿದೆ. ಆದರೆ  ಜಾಹೀರಾತು ಕ್ಷೇತ್ರದಲ್ಲಿ ಎಲ್ಲರಿಗಿಂತ ಮುಂದಿರುವ ಲಕ್ಸ್ ಸಾಬೂನು ಮಾತ್ರ ಮಾರಾಟ ವಿಚಾರದಲ್ಲಿ ಹಿಂದೆ ಬಿದ್ದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ