ಯಾವುದೇ ಸಂದರ್ಭದಲ್ಲಿದ್ದರೂ ಕೂಡ ಈ ವೇಳೆ ಮಾತ್ರ ಕಾಲು ತೊಳೆಯುವುದನ್ನು ಮರೆಯಬೇಡಿ. ಯಾಕೆ ಗೊತ್ತಾ?

ಸೋಮವಾರ, 28 ಜನವರಿ 2019 (06:26 IST)
ಬೆಂಗಳೂರು : ಕೆಲವು ಜನರಿಗೆ ಕಾಲಿಗೆ ನೀರು ಹಾಕುವುದೆಂದರೆ ಆಗುವುದಿಲ್ಲ. ಆದರೆ ಕಾಲುಗಳನ್ನು ತೊಳೆಯುವುದರಿಂದಲೂ ಸಾಕಷ್ಟು ಲಾಭಗಳಿವೆ ಎಂಬುದನ್ನು ಅಂತವರು ಮೊದಲು ತಿಳಿದಿರಲೇಬೇಕು. ಹೌದು. ಕೆಲವೊಂದು ಕೆಲಸಗಳನ್ನು ಮಾಡುವಾಗ ಕಾಲುಗಳನ್ನು ತೊಳೆದ್ರೆ ಉತ್ತಮ ಫಲಿತಾಂಶ ಪ್ರಾಪ್ತಿಯಾಗಲಿದೆ.


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೊರಗಿನಿಂದ ಬಂದ ನಂತರ ಕಾಲುಗಳನ್ನು ತೊಳೆದು ಒಳಗೆ ಹೋದರೆ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ ಎಂದು ಹೇಳಲಾಗಿದೆ. ಹಾಗೇ ವಿಜ್ಞಾನ  ಕೂಡ ಹೀಗೆ ಹೇಳುತ್ತದೆ. ಕಾರಣ ಕಾಲುಗಳಿಗೆ ಕೆಸರು, ಧೂಳು ಸೇರಿಕೊಂಡಿರುತ್ತದೆ. ಅದು ಮನೆಯೊಳಗೆ ಹರಡಿ ಬೇರೆ ಬೇರೆ ರೋಗಗಳಿಗೆ ಕಾರಣವಾಗಬಹುದು.


ಏಕಾಗ್ರತೆಯಿಂದ ದೇವರನ್ನು ಪೂಜಿಸಿದರೆ ಬೇಗ ಫಲ ದೊರೆಯುತ್ತದೆ ಎನ್ನುತ್ತಾರೆ. ಈ ಏಕಾಗ್ರತೆ ಮೂಡಬೇಕೆಂದರೆ ಪೂಜೆಗಿಂತ ಮೊದಲು ಕಾಲು ತೊಳೆಯಬೇಕು. ಹಾಗೇ ಯೋಗ ಮಾಡುವ ಮೊದಲು ಕಾಲು ತೊಳೆಯಬೇಕು. ಇದರಿಂದ ಸಕಾರಾತ್ಮಕ ಚಿಂತನೆ ವೃದ್ಧಿಯಾಗಿ ಶಕ್ತಿ ಪ್ರಾಪ್ತವಾಗುತ್ತದೆ.


ರಾತ್ರಿ ಹಾಸಿಗೆಗೆ ಹೋಗುವ ಮೊದಲು ಕಾಲು ತೊಳೆಯಬೇಕು. ಕಾಲು ತೊಳೆಯುವುದರಿಂದ ಶರೀರದಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಇದರಿಂದ ಸುಖಕರ ನಿದ್ರೆ ನಿಮ್ಮದಾಗುತ್ತದೆ. ಕೆಟ್ಟ ಕನಸು ಕೂಡ ಬೀಳುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ