ಮಾಜಿ ಸಿಎಂ ಸಿದ್ದರಾಮಯ್ಯನವರ ಸಹಿ ನಕಲು ಮಾಡಿದ ವಂಚಕರು ಅರೆಸ್ಟ್

ಶನಿವಾರ, 26 ಜನವರಿ 2019 (11:01 IST)
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಿಯನ್ನೇ ನಕಲು ಮಾಡಿದ ಆರೋಪದ ಮೇಲೆ ಇಬ್ಬರು ವಂಚಕರನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.


ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸಂಗೊಳ್ಳಿ ಗ್ರಾಮದ ಸಿದ್ಧಾರೂಡ ಸಂಗೊಳ್ಳಿ  (32) ಹಾಗೂ ಅಂದಿನ ಸಿಎಂ ಕಚೇರಿಯ ಸ್ಟೆನೊಗ್ರಾಫರ್ ಆಗಿದ್ದ ಗುರುನಾಥ್ (32) ಬಂಧಿತ ಆರೋಪಿಗಳು. ಆರೋಪಿ ಸಿದ್ದಾರೂಡ, ತಿಮ್ಮಾಪುರದಲ್ಲಿ ಪರಮಾನಂದ ಅಭಿವೃದ್ಧಿ ಸಮಿತಿಯನ್ನು ರಚಿಸಿ ಸಮಿತಿಯ ಅಧ್ಯಕ್ಷ ಕೂಡ ಆಗಿದ್ದನು.  ಈತ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಹುಟ್ಟೂರಾದ ಗೋಕಾಕ್ ನ ಸಂಗೊಳ್ಳಿಯಲ್ಲಿ ಕುರುಬರ ಭವನ ನಿರ್ಮಾಣಕ್ಕೆ ಅರ್ಜಿ ಕೊಟ್ಟಿದ್ದನು. ನಂತರ ಈತ ಅಂದಿನ ಸಿಎಂ ಕಚೇರಿಯ ಸ್ಟೆನೊ ಗುರುನಾಥ್ ಜೊತೆ ಸೇರಿ ಕುರುಬರ ಸಂಘ ನಿರ್ಮಾಣಕ್ಕೆ 200 ಕೋಟಿ ಹಣ ಮಂಜೂರು ಮಾಡಿರೋದಾಗಿ ಲೆಟರ್ ಮಾಡಿ ಸಿದ್ದರಾಮಯ್ಯರ ಸಹಿ ನಕಲು ಮಾಡಿದ್ದಾನೆ.


ಈ ಬಗ್ಗೆ ಹಿಂದುಳಿದ ವರ್ಗಗಳ ಡೆಪ್ಯುಟಿ ಸೆಕ್ರೆಟರಿ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ್ವಯ ಇದೀಗ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ