ಬೆಂಗಳೂರು : ಮದುವೆಯಾದ ಹೆಣ್ಣುಮಕ್ಕಳು ಸಿಂಧೂರ ಧರಿಸಬೇಕು ಎಂದು ಹಿಂದೂ ಧರ್ಮ ಶಾಸ್ತ್ರ ಹೇಳುತ್ತದೆ. ಒಂದುವೇಳೆ ಕುಂಕುಮ ಹಚ್ಚಿಕೊಳ್ಳದಿರುವುದು ಅಶುಭದ ಸಂಕೇತವೆಂದು ನಂಬಲಾಗಿದೆ. ಆದರೆ ಸಿಂಧೂರ ಇಡುವ ವೇಳೆ ಮಹಿಳೆಯರು ಕೆಲವು ತಪ್ಪುಗಳನ್ನು ಮಾಡಿದರೆ ಅವರ ಜೀವನದ ಮೇಲೆ ಹಾಗೂ ಪತಿಯ ಮೇಲೆ ಪ್ರಭಾವ ಬೀರುತ್ತದೆ ಎನ್ನುತ್ತಾರೆ.
ಮಹಿಳೆಯರು ಕುಂಕುಮ ಹಚ್ಚಿಕೊಳ್ಳುವಾಗ ಆತುರಪಡಬಾರದು. ಹಣೆಯ ಮಧ್ಯದಲ್ಲಿ ಕುಂಕುಮ ಇಡಬೇಕು. ಆತುರದಲ್ಲಿ ಅಂಚಿನಲ್ಲಿ ಕುಂಕುಮವಿಟ್ಟುಕೊಂಡರೆ ಪತಿ ಜೊತೆ ಗಲಾಟೆಯಾಗುತ್ತೆ ಎಂದೇ ಅರ್ಥ. ಪತಿ ಜೊತೆ ಸಂಬಂಧ ಹದಗೆಡುತ್ತ ಬರುತ್ತದೆ. ಹಣೆಯ ಮಧ್ಯೆ ಉದ್ದವಾಗಿ ಕುಂಕುಮವಿಡುವುದು ಶುಭಕರ.
ಕಾಣದಂತೆ ಸಣ್ಣದಾಗಿ ಕುಂಕುಮ ಇಟ್ಟುಕೊಳ್ಳಬಾರದು. ಇದು ಪತಿ ಮೇಲೆ ಪ್ರಭಾವ ಬೀರುತ್ತದೆ. ಕ್ರಮೇಣ ಪತಿ, ಪತ್ನಿಯಿಂದ ದೂರವಾಗ್ತಾ ಹೋಗ್ತಾನೆ ಎಂಬ ಧಾರ್ಮಿಕ ನಂಬಿಕೆ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.