ನಿರ್ದೇಶಕ ಗುರುಪ್ರಸಾದ್ ಖಡಕ್ ವಾರ್ನಿಂಗ್ ಕೊಟ್ಟ ಹುಚ್ಚ ವೆಂಕಟ್

ಗುರುವಾರ, 1 ನವೆಂಬರ್ 2018 (07:20 IST)
ಬೆಂಗಳೂರು : ನಟಿಯರ ಮೀಟೂ ಆರೋಪದ ಬಗ್ಗೆ ವಿರೋಧ ವ್ಯಕ್ತಪಡಿಸಿದ ನಿರ್ದೇಶಕ ಗುರುಪ್ರಸಾದ್ ವಿರುದ್ಧ ಇದೀಗ ಹುಚ್ಚ ವೆಂಕಟ್ ಕೆಂಡಮಂಡಲವಾಗಿದ್ದಾರೆ.


‘ಕುಷ್ಕಾ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುರುಪ್ರಸಾದ್ ಅವರು,’ ಮಿಟೂ ಆರೋಪಗಳನ್ನು ಮಾಡುವ ಮೂಲಕ ನಟಿಯರು ತಾವು ಪತಿವ್ರತೆಯರು ಎಂದು ಸಾಬೀತುಪಡಿಸಲು ಹೊರಟಿದ್ದಾರೆ. ತಮ್ಮ ಮನೆಯಲ್ಲಿ ಗಂಡ, ಅತ್ತೆ ಹಾಗೂ ಮಾವನ ಮುಂದೆ ತಾವು ಪತಿವ್ರತೆಯರೂ ಎಂಬುದನ್ನು ಹೇಳೋಕೆ ಕೆಲವರು ಯತ್ನಿಸುತ್ತಿದ್ದಾರೆ' ಎಂದು ಹೇಳಿದ್ದರು.


ಹೆಣ್ಣಮಕ್ಕಳ ಬಗ್ಗೆ ಈ ರೀತಿ ಮಾತನಾಡಿದ ನಿರ್ದೇಶಕ ಗುರುಪ್ರಸಾದ್ ಮೇಲೆ ಕಿಡಿಕಾರಿದ ಹುಚ್ಚ ವೆಂಕಟ್ ,'ನಿರ್ದೇಶಕರು ತಮ್ಮ ಚಿತ್ರದಲ್ಲಿ ಐಟಂ ಸಾಂಗ್ ಮಾಡಿಸುವವರು. ಆದರೆ ಈಗ ಅಂತವರೇ ಮುಂದೆ ಬಂದು, ನೀನ್ ಪತಿವ್ರತೆನಾ ಅಂತ ಕೇಳುತ್ತಿರಲ್ಲ. ನಾಚಿಕೆ ಆಗಲ್ವಾ?. ಡಬಲ್ ಮೀನಿಂಗ್ ಡೈಲಾಗ್ಸ್ ಬರೆದುಕೊಂಡು, ಜೀವನ ಮಾಡುತ್ತಿದ್ದಿರಲ್ಲಾ,ನಿಮ್ಮ ತಾಯಿಗೆ ನಿಮ್ಮ ಸಿನಿಮಾ ತೋರಿಸಿದ್ದೀರಾ..? ನಿಮ್ಮ ಮನೆ ಹೆಣ್ಣು ಮಕ್ಕಳನ್ನು ಬಚ್ಚಿಟ್ಟುಕೊಂಡು, ಕಂಡವರ ಮನೆ ಮಕ್ಕಳ ಬಗ್ಗೆ ಹೀಗೆ ಮಾತನಾಡುತ್ತಿರುಲ್ಲಾ ನಾಚಿಕೆ ಆಗಲ್ವಾ..?' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಅಲ್ಲದೇ ನೀವು ಮೊದಲು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಿನ್ನ ಕೈ ಕತ್ತರಿಸಿ ಬಿಡುತ್ತೇನೆ' ಎಂದು ಗುರುಪ್ರಸಾದ್ ಗೆ ಹುಚ್ಚ ವೆಂಕಟ್ ಖಡಕ್ ಎಚ್ಚರಿಕೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ