ಆಮೆಯ ಮೂರ್ತಿಯನ್ನು ಅಪ್ಪಿ ತಪ್ಪಿಯೂ ಮನೆಯ ಈ ದಿಕ್ಕಿನಲ್ಲಿ ಮಾತ್ರ ಇಡಬೇಡಿ

ಶುಕ್ರವಾರ, 31 ಆಗಸ್ಟ್ 2018 (14:26 IST)
ಬೆಂಗಳೂರು : ವಾಸ್ತು ಶಾಸ್ತ್ರ ಪ್ರಕಾರ  ನೀವು ವಾಸಿಸುವ ಮನೆ ನಿಮ್ಮ ವೈಯಕ್ತಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ, ಹಣಕಾಸಿನ ವ್ಯವಹಾರ, ಮನೆಯಲ್ಲಿ ಶಾಂತಿ ಹಾಗು ಸಂಬಂಧಗಳಲ್ಲಿ ಒಡಕು ಇತರ  ಕಾರಣಗಳಿಗೆ ಮನೆಯ ವಾಸ್ತು ದೋಷ ಕಾರಣ ವಾಗಿರುತ್ತದೆಯಂತೆ, ಹಾಗಾದರೆ ಇದಕ್ಕೆ ಪರಿಹಾರ ಏನು ಅದಕ್ಕೂ ವಾಸ್ತು ಶಾಸ್ತ್ರದಲ್ಲಿ ಕೆಲವು ಪರಿಹಾರ ಗಳಿದ್ದು ಅದರಲ್ಲಿ ಮುಖ್ಯವಾದದು ಆಮೆ ಮೂರ್ತಿ.


ಆಮೆ ಶ್ರೀ ವಿಷ್ಣುವಿನ ಸ್ವರೂಪ. ಈ ಆಮೆಯ ಮೂರ್ತಿಯನ್ನು ಮನೆಯಲ್ಲಿಟ್ಟುಕೊಂಡರೆ ಧನಾತ್ಮಕ ಶಕ್ತಿಯನ್ನು ಮನೆಯಲ್ಲಿ ಹರಿಸಲು ಸಹಾಯ ಮಾಡುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಹಾಗೇ ಮನೆಯ ಮುಖ್ಯ ದ್ವಾರದಲ್ಲಿ ಆಮೆಯ ಮೂರ್ತಿಯನ್ನು ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ತಡೆದು, ಮನೆಯಲ್ಲಿ ನಡೆಯುವ ಜಗಳ ವಿಪರೀತಕ್ಕೆ ಹೋಗದಂತೆ ತಡೆಯುತ್ತದೆ. ಅಲ್ಲದೇ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹ ಆಮೆಯನ್ನು ಮನೆಯ ಪೂರ್ವ ಭಾಗದಲ್ಲಿ ಇಡುತ್ತಾರೆ.


ಆದರೆ ಅಪ್ಪಿ ತಪ್ಪಿಯೂ ಈಶಾನ್ಯ ಭಾಗದಲ್ಲಿ ಮಾತ್ರ ಇಡಬಾರದು ಇಟ್ಟರೆ ಹಣಕಾಸು ತೊಂದರೆ ಶುರುವಾಗುತ್ತದೆ. ಇನ್ನು ಹಣದ ಒಳ ಹರಿವು ಹೆಚ್ಚಿಸಲು ಸ್ಪಟಿಕದಿಂದ ತಯಾರಿಸಿದ ಆಮೆಯನ್ನು ಮನೆ ಅಥವಾ ನೀವು ಕೆಲಸ ಮಾಡುವ ಸ್ಥಳದಲ್ಲಿ ಇಡಬೇಕು. ಇತ್ತಾಳೆ ಆಮೆಯಿಂದ ಉದ್ಯೋಗ ಪ್ರಾಪ್ತಿಯಾದರೆ, ಮಣ್ಣಿನ ಆಮೆಯಿಂದ ಆರೋಗ್ಯ ಸಮಸ್ಯೆ ದೂರವಾಗುತ್ತದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ