ಅಬ್ಬಾ..! ಇಲಿ ಕಚ್ಚಿದ್ದಕ್ಕೂ ಇಷ್ಟು ದುಬಾರಿ ಮೊತ್ತದ ಪರಿಹಾರ!
ಇದು ನಡೆದಿರುವುದು ತಮಿಳುನಾಡಿನಲ್ಲಿ. ರೈಲಿನಲ್ಲಿ ಇಲಿ ಕಚ್ಚಿ ಆದ ಮಾನಸಿಕ ಕಿರಿ ಕಿರಿ ಮತ್ತು ಗಾಯಕ್ಕೆ ಪರಿಹಾರ ನೀಡುವಂತೆ ವೆಂಕಟಾಚಲಂ ಎಂಬವರು ಗ್ರಾಹಕ ವೇದಿಕೆಗೆ ದೂರು ನೀಡಿದ್ದರು.
ಇದರ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆ ಇಲಿ ಕಚ್ಚಿದ ವ್ಯಕ್ತಿಗೆ ಪರಿಹಾರ ರೂಪವಾಗಿ 25 ಸಾವಿರ ರೂ. ಮತ್ತು ವೈದ್ಯಕೀಯ ಚಿಕಿತ್ಸೆಗೆ 2 ಸಾವಿರ ರೂ. ಹೆಚ್ಚುವರಿಯಾಗಿ ನೀಡಲು ಆದೇಶಿಸಿದೆ. ಈಗಾಗಲೇ ವೆಂಕಟಾಚಲಂ ವೈದ್ಯಕೀಯ ಚಿಕಿತ್ಸೆಗೆ 5000 ರೂ. ಖರ್ಚು ಮಾಡಿದ್ದು, ಅದನ್ನು ಭರಿಸಲೂ ವೇದಿಕೆ ಆದೇಶಿಸಿದೆ.