ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಇಡಬೇಡಿ

ಬುಧವಾರ, 12 ಡಿಸೆಂಬರ್ 2018 (07:18 IST)
ಬೆಂಗಳೂರು : ವಾಸ್ತುಶಾಸ್ತ್ರದ ಪ್ರಕಾರ ಮಲಗುವ ಕೋಣೆ ತುಂಬಾ ಸುಂದರವಾಗಿ, ವಿಶಾಲವಾಗಿ ಇದ್ದರೆ ಅಲ್ಲಿ ವಿಶ್ರಾಂತಿ, ನೆಮ್ಮದಿ  ಸಿಗುತ್ತದೆ. ಆದ್ದರಿಂದ ಮಲಗುವ ಕೋಣೆಯಲ್ಲಿ ಯಾವ ವಸ್ತುಗಳನ್ನು ಇಡಬೇಕು, ಯಾವ ವಸ್ತುಗಳನ್ನು ಇಡಬಾರದು ಎಂಬುದನ್ನು ತಿಳಿದುಕೊಳ್ಳಿ.


ಮಲಗುವ ಕೋಣೆಯಲ್ಲಿ ಆಕರ್ಷಕ ಫೋಟೊಗಳು, ಗಂಡಹೆಂಡತಿ ಪೋಟೊ ಇಡಬೇಕು. ಮಲಗುವ ಕೋಣೆ ಆಯತಾಕಾರದಲ್ಲಿ ಅಥವಾ ಚೌಕಾಕಾರವಾಗಿ ಇರಬೇಕು. ಮಲಗುವ ಕೋಣೆಯಲ್ಲಿ ಮೀನಿನ ಅಕ್ವೇರಿಯಂ ಇಡಬಾರದು. ವಾಸ್ತುಶಾಸ್ತ್ರದ ಪ್ರಕಾರ ಮಲಗುವ ಕೋಣೆಯ ಬಾಗಿಲು 90 ಡಿಗ್ರಿ ಕೋನದಲ್ಲಿರಬೇಕು.


ಮಲಗುವ ಕೋಣೆಯ ಬಣ್ಣ ತಿಳಿ ಬಣ್ಣದಲ್ಲಿರಬೇಕು. ಇದರಿಂದ ಮನಸ್ಸಿಗೆ ಶಾಂತಿ ದೊರಕುವುದರಿಂದ ಅಲ್ಲಿ  ಜಗಳ ನಡೆಯುವುದಿಲ್ಲ. ಮಲಗುವ ಕೋಣೆಯಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಇಡುವುದಾದರೆ ದಕ್ಷಿಣ ಪೂರ್ವದ ಕಡೆಗೆ ಇಟ್ಟರೆ ಒಳ್ಳೆಯದು. ಕೋಣೆಯ ಮಂಚವನ್ನು ದಕ್ಷಿಣ-ಪಶ್ಚಿಮವಾಗಿ ಇಡಬೇಕು.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ