ಬೆಂಗಳೂರು : ಯುರಿನ್ ನಲ್ಲಿ ಇನ್ ಫೆಕ್ಷನ್ ಆದಾಗ ಉರಿ ಮೂತ್ರ, ಕೆಂಪುಬಣ್ಣದ ಮೂತ್ರ ಆಗುತ್ತಿರುತ್ತದೆ. ಇದನ್ನು ಮನೆ ಮದ್ದಿನಿಂದಲೂ ಕೂಡ ನಿವಾರಿಸಿಕೊಳ್ಳಬಹುದು. ಅದಕ್ಕೆ ಮನೆಮದ್ದು ಇಲ್ಲಿದೆ ನೋಡಿ.
ಸೋರೆಕಾಯಿಯನ್ನು ಜ್ಯೂಸ್ ಮಾಡಿಕೊಂಡು ಅದನ್ನು 250ml ತೆಗೆದುಕೊಳ್ಳಬೇಕು, ಅದಕ್ಕೆ 2-3 ಟೀ ಸ್ಪೂನ್ ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ. ಊಟ ಆಗಿ ಅರ್ಧಗಂಟೆ ನಂತರ ಕುಡಿಯಿರಿ. ಹೀಗೆ ಕುಡಿಯುವುದರಿಂದ 2-3 ದಿನದಲ್ಲಿ ಯಾವುದೇ ರೀತಿಯ ಯುರಿನ್ ಇನ್ ಫೆಕ್ಷನ್ ಆದ್ರೂ ಕ್ಲೀಯರ್ ಆಗುತ್ತದೆ.
ತಿಳಿ ಮಜ್ಜಿಗೆ 250ml ತೆಗೆದುಕೊಂಡು ಅದಕ್ಕೆ ½ ಹೋಳು ನಿಂಬೆ ಹಣ್ಣಿನ ರಸ ಹಾಕಿ 2-3 ಟೀ ಸ್ಪೂನ್ ಕಲ್ಲುಸಕ್ಕರೆ ಹಾಕಬೇಕು. ಆದರೆ ಡಯಾಬಿಟಿಸ್ ಇರುವವರು ಕಲ್ಲುಸಕ್ಕರೆ ಹಾಕಬೇಡಿ. ಹೀಗೆ ಮಾಡಿ ಕುಡಿಯುವುದರಿಂದ ಯುರಿನ್ ಇನ್ ಫೆಕ್ಷನ್ ಸಮಸ್ಯೆ ಸರಿಯಾಗುತ್ತದೆ. ಇದನ್ನು ದಿನಕ್ಕೆ 3 ಬಾರಿ ಕುಡಿಯಬೇಕು. ಊಟ ಆಗಿ ಅರ್ಧಗಂಟೆ ನಂತರ ಕುಡಿಯಿರಿ. ಹೀಗೆ ಕುಡಿಯುವುದರಿಂದ 2-3 ದಿನದಲ್ಲಿ ಯಾವುದೇ ರೀತಿಯ ಯುರಿನ್ ಇನ್ ಫೆಕ್ಷನ್ ಕಡಿಮೆ ಆಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.