ಯಾವುದೇ ಕಾರಣಕ್ಕೂ ಈ ರೀತಿ ಇರುವ ಹೂಗಳನ್ನು ದೇವರ ಪೂಜೆಗೆ ಬಳಸಬೇಡಿ

ಗುರುವಾರ, 1 ಆಗಸ್ಟ್ 2019 (08:56 IST)
ಬೆಂಗಳೂರು : ಪ್ರತಿಯೋಬ್ಬರು ದೇವರಿಗೆ ಪೂಜೆ ಮಾಡುವಾಗ ಹೂಗಳನ್ನಿಟ್ಟ ಬಳಿಕ ಪೂಜೆ ಮಾಡುತ್ತಾರೆ. ಇದರಿಂದ ದೇವರು ನಮ್ಮ ಮೇಲೆ ಕೃಪೆ ತೋರುತ್ತಾನೆ ಎಂಬ ನಂಬಿಕೆ. ಆದರೆ ದೇವರಿಗೆ ಇಡುವ ಹೂವನ್ನು ಎಲ್ಲೆಂದರಲ್ಲಿಂದ ಕಿತ್ತು ತರಬಾರದು. ಇದರಿಂದ ದೇವರನ್ನು ಮೈಲಿಗೆ ಮಾಡಿದಂತಾಗುತ್ತದೆ.




ಹೌದು. ದೇವರ ಪೂಜೆಗೆ ತರುವ ಹೂವು ತುಂಬಾ ಪವಿತ್ರವಾಗಿರಬೇಕು. ಹೂವುಗಳನ್ನು ನೀರಿನಲ್ಲಿ ಮುಳುಗಿಸಿ ತೊಳೆಯುವುದಿಲ್ಲ. ಅದರ ಬದಲು ಹೂವುಗಳ ಮೇಲೆ ನೀರನ್ನು ಸಿಂಪಡಿಸುತ್ತೇವೆ. ಆದ್ದರಿಂದ ಅಪವಿತ್ರ ಸ್ಥಳದಲ್ಲಿ ಬೆಳೆದ ಹೂವನ್ನು ತರಬಾರದು.
ಹಾಗೇ ಎಸುಳುಗಳು ಉದುರಿದ ಪುಷ್ಪ,ಗಂಧವಿಲ್ಲದ ಅಥವಾ ಉಗ್ರ ಗಂಧದ ಪುಷ್ಪ,ಆಘ್ರಾಣಿಸಿದ ಪುಷ್ಪ,ನೆಲದ ಮೇಲೆ ಬಿದ್ದ ಹೂವು, ಎಡಗೈಯಿಂದ ತಂದಿರುವ, ಬೇರೆಯವರನ್ನು ಅಪ್ರಸನ್ನಗೊಳಿಸಿ ತಂದ ಪುಷ್ಪಗಳನ್ನು ದೇವತೆಗೆ ಅರ್ಪಿಸುವುದು ಒಳ್ಳೆಯದಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ