ಅಕ್ಕಿಯ ಜೊತೆಗೆ ಇದನ್ನು ಹಾಕಿದರೆ ಹುಳ ಬರದಂತೆ ತುಂಬಾ ದಿನ ಶೇಖರಿಸಿಡಬಹುದು

ಬುಧವಾರ, 31 ಜುಲೈ 2019 (09:52 IST)
ಬೆಂಗಳೂರು : ಸಾಮಾನ್ಯವಾಗಿ ಎಲ್ಲರೂ ಅಕ್ಕಿಯನ್ನು ಶೇಖರಿಸಿಟ್ಟರುತ್ತೇವೆ. ಆದರೆ ಅಕ್ಕಿಯನ್ನುತುಂಬಾ ದಿನ ಇಟ್ಟಾಗ ಅದರಲ್ಲಿ ಹುಳಗಳು ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಅಕ್ಕಿಯ ಜೊತೆಗೆ ಇವುಗಳನ್ನು ಹಾಕಿಟ್ಟರೆ ಹುಳಬರದಂತೆ ಅಕ್ಕಿಯನ್ನು ಶೇಖರಿಸಿಟ್ಟುಕೊಳ್ಳಬಹುದು. ಸಂರಕ್ಷಿಸಬಹುದು.




*ಒಂದು ಒಣಗಿದ ಡಬ್ಬವನ್ನು ತೆಗೆದುಕೊಂಡು ಅದರ ಕೆಳಗಡೆ ಒಂದು ನ್ಯೂಸ್ ಪೇಪರ್ ಅಥವಾ ಟಿಶ್ಯು ಪೇಪರ್ ನ್ನು ಹಾಕಿ ನಂತರ ಅಕ್ಕಿ ಹಾಕಿ ಅದರ ಮೆಲೆ ಕೂಡ ಪೇಪರ್ ಹಾಕಿ ಮುಚ್ಚಳವನ್ನು ಭದ್ರವಾಗಿ ಹಾಕಿಟ್ಟರೆ ಅಕ್ಕಿಗೆ ಹುಳ ಹಿಡಿಯಲ್ಲ.
*ಅಕ್ಕಿಯ ಡಬ್ಬಕ್ಕೆ ಬೆಳ್ಳುಳ್ಳಿಯನ್ನು ಹಾಕಿಟ್ಟರೆ ಅದಕ್ಕೆ ಹುಳು ಬರಲ್ಲ.


*ಅಕ್ಕಿಯ ಡಬ್ಬಕ್ಕೆ ಒಣಗಿದ ಕಹಿಬೇವಿನ ಎಲೆಗಳನ್ನು ಹಾಕಿಡುವುದರಿಂದಲೂ ಕೂಡ ಹುಳಗಳ ಹಾವಳಿ ತಪ್ಪುತ್ತದೆ.

*ಒಣಮೆಣಸಿನ ಕಾಯಿಯನ್ನು ಅಕ್ಕಿಯ ಡಬ್ಬಕ್ಕೆ ಹಾಕಿಟ್ಟರೆ ಅದಕ್ಕೆ ಹುಳು ಬರಲ್ಲ.


*ಕರಿಬೇವಿನ ತೊಟ್ಟನ್ನು ಅಕ್ಕಿಯ ಡಬ್ಬಕ್ಕೆ ಹಾಕಿದರೆ ಹುಳ ಹಾವಳಿಯಿಂದ ತಪ್ಪಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ