ಯಾವುದೇ ಕಾರಣಕ್ಕೂ ಗಣೇಶ ಮೂರ್ತಿಯ ಈ ಭಾಗವನ್ನು ಮಾತ್ರ ದರ್ಶಿಸಬೇಡಿ
ಶುಕ್ರವಾರ, 14 ಸೆಪ್ಟಂಬರ್ 2018 (12:25 IST)
ಬೆಂಗಳೂರು : ಗಣೇಶ ಹಬ್ಬದಂದು ಎಲ್ಲಾ ಕಡೆ ಗಣೇಶನ ಮೂರ್ತಿಯನ್ನಿಟ್ಟು ಪೂಜೆ ಮಾಡುತ್ತಾರೆ. ಎಲ್ಲಾ ವಿಘ್ನಗಳನ್ನು ನಿವಾರಿಸುವಂತೆ ಕೇಳಿಕೊಳ್ಳುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಗಣೇಶ ಮೂರ್ತಿಯ ಹಿಂಭಾಗವನ್ನು ಮಾತ್ರ ದರ್ಶಿಸಬೇಡಿ.
ಗಣೇಶನ ಶರೀರದ ಪ್ರತಿಯೊಂದು ಅಂಗಾಂಗವೂ ತನ್ನದೇ ಆದ ಮೌಲ್ಯ ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ. ಆನೆ ತಲೆಯಲ್ಲಿ ನಂಬಿಕೆ, ಬುದ್ಧಿವಂತಿಕೆ ಮತ್ತು ವಿವೇಚನೆ ಅಡಗಿದೆ. ದಂತ, ಸಾಮರ್ಥ್ಯವನ್ನು ಸೂಚಿಸುತ್ತದೆ. ಕಿವಿ ವಿವೇಕದ ಸಂಕೇತ. ಸೊಂಡಿಲು, ಸತ್ಯ ಮತ್ತು ಮಿಥ್ಯೆಗಳ ನಡುವಣ ವ್ಯತ್ಯಾಸವನ್ನು ಸೂಚಿಸುತ್ತದೆ ಹೀಗೆ ಪ್ರತಿಯೊಂದು ಭಾಗದಲ್ಲಿಯೂ ಜೀವನ ಹಾಗೂ ಬ್ರಹ್ಮಾಂಡದ ಅಂಶಗಳು ಅಡಗಿವೆ. ಆದರೆ ಗಣೇಶನ ಹಿಂಬದಿಯನ್ನು ಮಾತ್ರ ನೋಡಬಾರದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಕಾರಣ, ಗಣೇಶನ ಹಿಂಭಾಗದಲ್ಲಿ ದಾರಿದ್ರ್ಯ ನೆಲೆಸಿದೆಯಂತೆ. ಗಣೇಶನ ಹಿಂಭಾಗವನ್ನು ದರ್ಶನ ಮಾಡುವ ವ್ಯಕ್ತಿ ಎಂತಹ ಶ್ರೀಮಂತನಾಗಿರಲಿ ಆತನಿಗೆ ಬಡತನ ಬರಲಿದೆಯಂತೆ. ಹಾಗಾಗಿ ಗಣೇಶನ ಹಿಂಭಾಗವನ್ನು ನೋಡುವಂತಿಲ್ಲ. ಗೊತ್ತಿಲ್ಲದೆ ನೋಡಿದಲ್ಲಿ ಗಣೇಶನಿಗೆ ಕ್ಷಮೆ ಕೋರಿ, ಪ್ರಾರ್ಥನೆ ಮಾಡಿದ್ರೆ ಎಲ್ಲ ಪಾಪಗಳು ಪರಿಹಾರವಾಗಲಿದೆ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.