ಶನಿ ಬೀಜ ಮಂತ್ರ ಯಾವುದು ಇದನ್ನು ಪಠಿಸುವುದರ ಫಲವೇನು

Krishnaveni K

ಶನಿವಾರ, 23 ಆಗಸ್ಟ್ 2025 (08:26 IST)
ಇಂದು ಶನಿವಾರವಾಗಿದ್ದು ಶನಿ ದೇವನ ಪೂಜೆಗೆ ಅರ್ಹವಾದ ದಿನವಾಗಿದೆ. ಶನಿ ದೋಷಕ್ಕೊಳಗಾದವರು ಇಂದು ತಪ್ಪದೇ ಶನಿಗೆ ಪೂಜೆ ಮಾಡುವುದರಿಂದ ದೋಷದ ಪರಿಣಾಮ ತಕ್ಕ ಮಟ್ಟಿಗೆ ಕಡಿಮೆಯಾಗುತ್ತದೆ.

ಶನಿವಾರದಂದು ಶನಿ ದೇವನಿಗೆ ಎಳ್ಳೆಣ್ಣೆ ಸಮರ್ಪಿಸುವುದು, ಕಾಗೆಗೆ ಆಹಾರ ನೀಡುವುದು, ಹನುಮಂತನಿಗೆ ಸೇವೆ ಮಾಡುವುದು ಶನಿಯ ಕೆಟ್ಟ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಬಹುದಾದ ದಾರಿಗಳಾಗಿವೆ. ಅದರ ಹೊರತಾಗಿ ಶನಿ ದೇವರ ಪೂಜೆ ಮಾಡುವಾಗ ಈ ಒಂದು ಮಂತ್ರವನ್ನು ತಪ್ಪದೇ ಪಠಿಸಿ.
ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ ॥
ಇದು ಶನಿಯ ಬೀಜ ಮಂತ್ರವಾಗಿದೆ. ಇದನ್ನು 108 ಬಾರಿ ಪಠಿಸುವುದರಿಂದ ಶನಿ ದೋಷದಿಂದ ಮುಕ್ತಿ ಪಡೆಯಬಹುದಾಗಿದೆ. ಅದರಲ್ಲೂ ಸಾಡೇ ಸಾತಿ ಶನಿ ಪ್ರಭಾವದಿಂದ ಬಳಲುತ್ತಿರುವವರು ಈ ಮಂತ್ರವನ್ನು ಇಂದು ತಪ್ಪದೇ ಪಠಿಸಿ. ಜೊತೆಗೆ ಶನಿಯ ಪ್ರಭಾವದಿಂದ ಉಂಟಾಗುವ ಮಾನಸಿಕ ಕ್ಲೇಶಗಳು ನಿವಾರಣೆಯಾಗುತ್ತವೆ. ಹಿಂದಿನ ಜೀವನದ ಋಣಾತ್ಮಕ ಕರ್ಮ ಫಲಗಳನ್ನು ನಿವಾರಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ