ಖಿನ್ನತೆಯಿಂದ ಮುಕ್ತಿ ಹೊಂದಲು ಶಾಸ್ತ್ರದ ಪ್ರಕಾರ ಹೀಗೆ ಮಾಡಿ

ಬುಧವಾರ, 27 ಮಾರ್ಚ್ 2019 (10:08 IST)
ಬೆಂಗಳೂರು : ಅಧಿಕ ಒತ್ತಡದಿಂದಾಗಿ ವ್ಯಕ್ತಿ ಖಿನ್ನತೆಗೆ ಒಳಗಾಗುತ್ತಾನೆ. ಇದಕ್ಕೆ ಕೆಲವರು ವೈದ್ಯರನ್ನು ಭೇಟಿ ಮಾಡಿ ಔಷಧಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲೂ ಇದಕ್ಕೆ ಪರಿಹಾರವಿದೆ.


ಹೌದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೂರು ಕಾರಣಗಳಿಂದಾಗಿ ಖಿನ್ನತೆ ಕಾಡುತ್ತದೆಯಂತೆ. ಪಿತೃದೋಷ, ಪೂರ್ವ ಜನ್ಮದ ಕರ್ಮ ಹಾಗೂ ಗ್ರಹಗಳ ಕಾರಣದಿಂದಾಗಿ ಖಿನ್ನತೆ ಕಾಡುತ್ತದೆಯಂತೆ. ಪಂಡಿತರು ಹೇಳಿದಂತೆ ಪಿತೃ ದೋಷಕ್ಕೆ ಶಾಂತಿ ಮಾಡಿಸಿದರೆ ಅದರಿಂದ ಕಾಡುವ ಖಿನ್ನತೆ ಕಡಿಮೆಯಾಗಲಿದೆಯಂತೆ.


ಹಾಗೇ ನಮ್ಮ ಜಾತಕದಲ್ಲಿ ಪೂರ್ವ ಜನ್ಮದ ಕರ್ಮದಿಂದ ಖಿನ್ನತೆ ಕಾಡುತ್ತಿರುವುದನ್ನು ಕಂಡುಬಂದರೆ  ಸೋಮವಾರದ ದಿನ ನೀರು ಹಾಗೂ ಹಾಲಿನಿಂದ ಭಗವಂತ ಶಿವನ ಪೂಜೆ ಮಾಡಿ. ಸೂರ್ಯೋದಯಕ್ಕೂ ಮೊದಲೆ ಎದ್ದು ಸೂರ್ಯನಿಗೆ ನಮಸ್ಕಾರ ಮಾಡಿದರೆ ಅದರಿಂದ ಮುಕ್ತಿ ಸಿಗುತ್ತದೆಯಂತೆ.


ಗ್ರಹ ದೋಷಗಳಿಂದಲೂ ಖಿನ್ನತೆ ಕಾಡುತ್ತದೆ. ಶನಿ ಮನಸ್ಸಿನ ಮೇಲೆ ಪ್ರಭಾವ ಬೀರುತ್ತಾನೆ. ಹಾಗಾಗಿ ಶನಿವಾರ ಎಣ್ಣೆಯನ್ನು ಹನುಮಂತನಿಗೆ ಅರ್ಪಿಸಿ. ಹನುಮಾನ್ ಚಾಲೀಸ್ ಹಾಗೂ ಸುಂದರಕಾಂಡವನ್ನು ಓದಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ