ಜೇನುತುಪ್ಪ: ಇದು ಸುಲಭದಲ್ಲಿ ಸಿಗುವ ಮಾಯಿಶ್ಚರೈಸರ್ ಮಾತ್ರವಲ್ಲದೆ ಚರ್ಮದ ಕಪ್ಪು ಕಲೆಗಳನ್ನು, ಮೊಡವೆ, ಚರ್ಮದ ಸುಕ್ಕನ್ನು ನಿವಾರಿಸುತ್ತದೆ. 2 ಚಮಚ ಜೇನುತುಪ್ಪಕ್ಕೆ 4 ಚಮಚ ನೀರನ್ನು ಸೇರಿಸಿ ಮುಖಕ್ಕೆ ಲೇಪನ ಮಾಡಿ 15 ನಿಮಿಷಗಳ ನಂತರ ಬೆಚ್ಚನೆಯ ನೀರಿನಿಂದ ಮುಖವನ್ನು ತೊಳೆಯುವುದು. ಇದು ಮುಖಕ್ಕೆ ತೇವಾಂಶವನ್ನು ನೀಡುವುದಲ್ಲದೆ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ
ಕೊಬ್ಬರಿ ಎಣ್ಣೆ: ಇದು ಕೂದಲು ಮತ್ತು ಚರ್ಮದ ಜೀವಕೋಶಗಳಿಗೆ ಸುಲಭವಾಗಿ ಒಗ್ಗಿಕೊಳ್ಳುವ ಮತ್ತು ಆರೋಗ್ಯಯುತವಾದ ಎಣ್ಣೆ. ಇದನ್ನು ನಿಮ್ಮ ಚರ್ಮಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ನಿಮ್ಮ ಚರ್ಮ ತೇವಾಂಶವನ್ನು ಕಳೆದುಕೊಳ್ಳುವುದಿಲ್ಲ.
ಲೋಳೆರಸ: ಲೋಳೆರಸವು ಚರ್ಮಕ್ಕೆ ತೇವಾಂಶವನ್ನು ನೀಡುವುದರಲ್ಲಿ ಅತಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಅದರಲ್ಲಿ ಸಿಗುವ ಜೆಲ್ ನ್ನು ಮುಖಕ್ಕೆ ಅಥವಾ ಒಣಗಿರುವ ಚರ್ಮದ ಭಾಗಕ್ಕೆ ಲೇಪನ ಮಾಡುವುದು. ಈ ಲೇಪನವು ವಿಟಮಿನ್ ಸಿ ಮತ್ತು ಇ ಗಳೊಂದಿಗೆ ಬೀಟಾ-ಕೆರೋಟಿನ್ ಅಂಶವನ್ನು ಹೊಂದಿರುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.