ಬೆಂಗಳೂರು : ನಕರಾತ್ಮಕ ಶಕ್ತಿಗಳು ಮನೆಯೊಳಗೆ ಬಂದಾಗ ಮನೆಯಲ್ಲಿ ದಾರಿದ್ರ್ಯ ತಾಂಡವಡುತ್ತದೆ. ಇದರಿಂದ ಮನೆಯಲ್ಲಿ ಕೆಟ್ಟ ಘಟನೆಗಳು ನಡೆಯುತ್ತಿರುತ್ತದೆ. ಈ ದಾರಿದ್ರ್ಯ ದೂರವಾಗಲು ಈ ತಂತ್ರ ಮಾಡಿ.
ಒಂದು ಗಾಜಿನ ಲೋಟದಲ್ಲಿ ಮುಕ್ಕಾಲುಭಾಗ ನೀರು ತುಂಬಿಸಿ ಶುದ್ಧ ಅರಶಿನ ಪುಡಿಯನ್ನು ಬೆರೆಸಿ ಬಿಳಿ ಎಕ್ಕದ ಹೂಗಳನ್ನು ಅದರಲ್ಲಿ ಹಾಕಿ ದೇವರಕೋಣೆಯಲ್ಲಿಡಿ. ಮೂರು ದಿನಗಳ ನಂತರ ಆ ನೀರನ್ನು ಮನೆಯ ಎಲ್ಲಾ ಕೋಣೆಗಳಿಗೂ ಸಿಂಪಡಿಸಿ ಎಕ್ಕದ ಹೂವನ್ನು ಯಾವುದಾದರೂ ಅರಳಿ ವೃಕ್ಷದ ಬುಡದಲ್ಲಿರಿಸಿ. ಇದನ್ನು ಪ್ರತಿ ತಿಂಗಳ ಚೌತಿಯಂದು ಮಾಡಿದರೆ ಮನೆಯಲ್ಲಿರುವ ದಾರಿದ್ರ್ಯ ನಿವಾರಣೆಯಾಗುತ್ತದೆ.