ಬೆಂಗಳೂರು : ಬಾಳೆಹಣ್ಣಿನಿಂದ ಹಲವು ಬಗೆಯ ಸಿಹಿತಿಂಡಿಗಳನ್ನು ಮಾಡಬಹುದು. ಅದರಲ್ಲಿ ಬಾಳೆಹಣ್ಣಿನ ಬೊಂಡಾ ಕೂಡ ಒಂದು. ಅದು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೊಣ.
ಬೇಕಾಗುವ ಸಾಮಾಗ್ರಿಗಳು : 2 ಬಾಳೆಹಣ್ಣು, 1ಕಪ್ ಗೋಧಿ ಹಿಟ್ಟು, 3 ಚಮಚ ಅಕ್ಕಿ ಹಿಟ್ಟು, 3 ಚಮಚ ಬೆಲ್ಲ, ¼ ಚಮಚ ಅಡುಗೆ ಸೋಡಾ, ¼ ಚಮಚ ಉಪ್ಪು, 1 ಏಲಕ್ಕಿ, ಎಣ್ಣೆ.
ಮಾಡುವ ವಿಧಾನ : ಬೆಲ್ಲ ಪುಡಿ ಮಾಡಿ ಸ್ವಲ್ಪ ನೀರು ಹಾಕಿ ಬಿಸಿ ಮಾಡಿ. ಗೋಧಿ ಹಿಟ್ಟಿನ ಜೊತೆಗೆ ಬಾಳೆಹಣ್ಣು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಅಕ್ಕಿಹಿಟ್ಟು, ಅಡುಗೆ ಸೋಡಾ, ಏಲಕ್ಕಿ ಪುಡಿ, ಉಪ್ಪು, ನೀರು ಸೇರಿಸಿ ಮದ್ಯಮ ಹದಕ್ಕೆ ಕಲಸಿಟ್ಟುಕೊಳ್ಳಿ. ಬಳಿಕ ಎಣ್ಣೆಯಲ್ಲಿ ಕರಿದರೆ ಬಾಳೆಹಣ್ಣಿನ ಬೊಂಡಾ ರೆಡಿ.