ಮನೆಯಲ್ಲಿನ ನಿತ್ಯ ಕಲಹ ನಿವಾರಣೆಯಾಗಲು ಹೀಗೆ ಮಾಡಿ

ಶುಕ್ರವಾರ, 4 ಅಕ್ಟೋಬರ್ 2019 (08:42 IST)
ಬೆಂಗಳೂರು : ಮನೆಯಲ್ಲಿ ಕಲಹಗಳು ನಡೆಯುವುದು ಸಹಜ. ಆದರೆ ಮನೆಯಲ್ಲಿ ಪ್ರತಿದಿನ ಕಲಹ ನಡೆಯುತ್ತಿದ್ದರೆ ಅಶಾಂತಿ ಉಂಟಾಗುತ್ತದೆ. ಇದರಿಂದ ಮನೆಗೆ ದರಿದ್ರ ಆವರಿಸುತ್ತದೆ. ಮನೆಯಲ್ಲಿ ಶಾಂತಿ ನೆಲೆಸಿ ಕಲಹಗಳು ನಿವಾರಣೆಯಾಗಲು ಹೀಗೆ ಮಾಡಿ.
ಪ್ರತಿನಿತ್ಯ ಅಸುರ ಸಂಧ್ಯಾ ವೇಳೆಯಲ್ಲಿ ಸುಮಾರು ಸಂಜೆ 5 :45 ರಿಂದ 6 :30 ರವೆರೆಗೆ ಸೂರ್ಯಾಸ್ತಮಾನದ ಸಂದರ್ಭದಲ್ಲಿ ಮನೆಯಲ್ಲಿ ಸುಂದರಖಾಂಡ ಪುಸ್ತಕವನ್ನು ಪೂಜೆಮಾಡಿ ನೈವೆದ್ಯಕ್ಕೆ ಇಟ್ಟು ಪ್ರತಿ ದಿನ ಓದಬೇಕು. ಓದುವಾಗ ಒಂದು ಮಣೆಯ ಮೇಲೆ ಕುಳಿತುಕೊಳ್ಳಿ ಒಂದು ವಸ್ತ್ರದ ಮೇಲೆ ಪುಸ್ತಕವನ್ನು ಇಡಿ. ಆಮೇಲೆ ಎಲ್ಲರಿಗೂ ನೈವೆದ್ಯ ಪ್ರಸಾದವನ್ನು ಹಂಚಿ. ಹೀಗೆ ಪ್ರತಿನಿತ್ಯ 48 ದಿನಗಳ ಕಾಲ ಮಾಡುತ್ತ ಬನ್ನಿ ನಿಮ್ಮ ಮನೆಯಲ್ಲಿ ನಿತ್ಯಕಲಹಗಳು ಪರಿಹಾರವಾಗುತ್ತವೆ. ನೀವು ನೆಮ್ಮದಿಯಿಂದ ಹಾಯಾಗಿ ಇರಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ