ದೇಹದ ಕೊಬ್ಬು ಕಡಿಮೆಯಾಗಲು ಮಜ್ಜಿಗೆ ಜೊತೆಗೆ ಇದನ್ನು ಸೇಸಿ ಕುಡಿಯಿರಿ

ಗುರುವಾರ, 3 ಅಕ್ಟೋಬರ್ 2019 (09:35 IST)
ಬೆಂಗಳೂರು : ನಮ್ಮ ದೇಹದಲ್ಲಿ ಕೊಬ್ಬು ಹೆಚ್ಚಾದರೆ ದೇಹದ ತೂಕ ಹೆಚ್ಚಾಗಿ ನಮ್ಮ ಅಂದ ಕೆಡುವುದು ಮಾತ್ರವಲ್ಲದೆ ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ.




ಮಜ್ಜಿಗೆಯಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ಹೊಟ್ಟೆಯ ಕೊಬ್ಬು, ಎದೆಯಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ತೂಕ ಕಡಿಮೆಯಾಗಲು ಸಹ ಸಹಕಾರಿಯಾಗಿದೆ.


ಒಂದು ಗ್ಲಾಸ್ ಕೆನೆಯಿಲ್ಲದ ಮಜ್ಜಿಗೆಯನ್ನು ತೆಗೆದುಕೊಂಡು ಅದಕ್ಕೆ ಶುಂಠಿ ಪೇಸ್ಟ್ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಓಂ ಕಾಳಿನ ಪುಡಿ ಮತ್ತು ಕರಿಬೇವನ್ನು ಬೆರಸಿ ನಿಮಗೆ ಬೇಕಾದಷ್ಟು ನೀರನ್ನು ಮಿಶ್ರಣ ಮಾಡುತ್ತ ಆಮೇಲೆ ಆ ಮಜ್ಜಿಗೆಯನ್ನು ಕುಡಿಯಬೇಕು. ಬೆಳಗ್ಗೆ ಉಪಹಾರ ಅದ ನಂತರ ಹಾಗೂ ಸಂಜೆ ಸಮಯದಲ್ಲಿ ಇನ್ನೊಂದು ಗ್ಲಾಸ್ ಮಿಶ್ರಣವನ್ನು ಕುಡಿಯಬೇಕು. ಹೀಗೆ ಸೇವಿಸುತ್ತಾ ಬಂದರೆ ಕೊಬ್ಬು ಶೀಘ್ರವಾಗಿ ಕಡಿಮೆಯಾಗುತ್ತ ಬರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ