ಬಾಡಿಗೆ ಮನೆಯ ವಾಸ್ತು ದೋಷ ನಿವಾರಿಸಲು ಹೀಗೆ ಮಾಡಿ

ಸೋಮವಾರ, 8 ಜೂನ್ 2020 (08:52 IST)
Normal 0 false false false EN-US X-NONE X-NONE

ಬೆಂಗಳೂರು :  ಎಲ್ಲರಿಗೂ ಸ್ವಂತ ಮನೆ ನಿರ್ಮಿಸಲು ಸಾಧ್ಯವಿರುವುದಿಲ್ಲ. ಆದಕಾರಣ ಕೆಲವರು ಬಾಡಿಗೆ ಮನೆಯಲ್ಲಿ ಇರುತ್ತಾರೆ. ಆದರೆ ಕೆಲವೊಂದು ಬಾಡಿಗೆ ಮನೆಯಲ್ಲಿ ವಾಸ್ತು ದೋಷವಿರುತ್ತದೆ. ಅದನ್ನು ನಿವಾರಿಸಲು ಹೀಗೆ ಮಾಡಿ.
 


 

ಮನೆಯ ವಾಸ್ತು ಸರಿಯಾಗಿದ್ದರೆ ಮಾತ್ರ ಆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಒಂದು ವೇಳೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರ ಮನೆಯಲ್ಲಿ ವಾಸ್ತುದೋಷವಿದ್ದರೆ ಮನೆಯ ಮುಂಬಾಗಿಲಿನಲ್ಲಿ ಗಣಪತಿಯ ಫೋಟೋವನ್ನು ಇರಿಸಿ. ಬಳಿಕ ಮನೆಯ ಹಾಲ್ ನಲ್ಲಿ ಯಾವುದೇ ಮೂಲೆಯಲ್ಲಿ 2 ಕೊಳಲುಗಳನ್ನು ಇರಿಸಬೆಕು.
 

ಹಾಗೇ ಮನೆಯ ಈಶಾನ್ಯ ದಿಕ್ಕಿನಲ್ಲಿ ಮಲ್ಲಿಗೆ ಹೂವನ್ನು ಇಡಬೇಕು, ವಾಯುವ್ಯ ದಿಕ್ಕಿನಲ್ಲಿ ಬಿಳಿ ಬಣ್ಣದ ಹೂವನ್ನು ಇರಿಸಬೇಕು, ನೈರುತ್ಯ ದಿಕ್ಕಿನಲ್ಲಿ ಹಳದಿ ಬಣ್ಣದ ಹೂವನ್ನು ಇರಿಸಬೇಕು. ಆಗ್ನೇಯ ದಿಕ್ಕಿನಲ್ಲಿ ಕೆಂಪು ಬಣ್ಣದ ಹೂವನ್ನು ಇರಿಸಬೇಕು. ಇದರಿಂದ ವಾಸ್ತುದೋಷ ನಿವಾರಣೆಯಾಗುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ