ಆರ್ಥಿಕ ಅಭಿವೃದ್ಧಿ ಹೊಂದಲು ಹೀಗೆ ಮಾಡಿ

ಗುರುವಾರ, 6 ಫೆಬ್ರವರಿ 2020 (07:57 IST)
ಬೆಂಗಳೂರು : ಆರ್ಥಿಕ ಅಭಿವೃದ್ಧಿಹೊಂದಲು, ಸಾಲಬಬಾಧೆಯಿಂದ ದೂರವಾಗಲು, ವ್ಯಾಪಾರದಲ್ಲಿ ಲಾಭಗಳಿಸಬೇಕೆಂದರೆ, ಅಮ್ಮನವರ ಅನುಗ್ರಹ ಪಡೆಯಬೇಕು. ಅದಕ್ಕಾಗಿ ಗೋದಿ ಹಿಟ್ಟಿನಿಂದ ಈ ಪರಿಹಾರವನ್ನು ಮಾಡಿ.


ಬೆಳಿಗ್ಗೆ ಬೇಗ ಎದ್ದು ಸ್ನಾನಾಧಿಗಳನ್ನು ಮುಗಿಸಿ, ದೇವರ ಮನೆಗೆ ತೆರಳಿ 5 ಬತ್ತಿಯಿಂದ ತುಪ್ಪದ ದೀಪಾರಾಧನೆ ಮಾಡಿ ಗೋದಿಹಿಟ್ಟಿನಿಂದ 108 ಸಣ‍್ಣ ಸಣ್ಣ ಉಂಡೆಗಳನ್ನು ಮಾಡಬೇಕು. ಅದನ್ನು ಬಳಿ ಹೂವಿನಿಂದ ಅಲಂಕಾರ ಮಾಡಿ ಬಳಿಕ ಒಂದೊಂದು ಉಂಡೆಗಳನ್ನು ನಿಮ್ಮ ಎದೆಯ ಬಳಿಯಿಟ್ಟುಕೊಂಡು  ‘ಓಂ ರೀಂ ನಮಃ ‘ ಈ ಮಂತ್ರವನ್ನು ಜಪಿಸಿ ಅಮ್ಮನವರ ಪಾದದಡಿಯಲ್ಲಿ ಇಡಬೇಕು. ಇದನ್ನು 108 ಸಲ ಮಾಡಿ ಬಳಿ ಅಮ್ಮನವರಿಗೆ ಪ್ರಿಯವಾದ, ಜೇನುತುಪ್ಪ ಅಥವಾ, ದಾಳಿಂಬೆ ಹಣ್ಣು ಅಥವಾ ಹಾಲಿನಿಂದ ಮಾಡಿದ ಸಿಹಿ ಪದಾರ್ಥವನ್ನು ನೈವೇದ್ಯವಾಗಿ ಇಡಬೇಕು.
 

ಪೂಜೆ ಮುಗಿದ ಬಳಿಕ ಈ ಉಂಡೆಗಳಿಗೆ ಮತ್ತಷ್ಟು ಗೋದಿ ಹಿಟ್ಟನ್ನು ಸೇರಿಸಿ 5 ಚಪಾತಿ ಮಾಡಿ 2 ನ್ನು ಮನೆಯವರು ತಿಂದು, ಉಳಿದ 3ನ್ನು ಪ್ರಾಣಿಗಳಿಗೆ ಹಾಕಬೇಕು. ಹೀಗೇ ನೀವು 11 ದಿನ ಮಾಡಿದರೆ ನಿಮ್ಮ ಸಮಸ್ಯೆಗಳು ದೂರವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ