ಬೆಂಗಳೂರು : ಸಾಮಾನ್ಯವಾಗಿ ದೇವರ ಪೂಜೆ ಮಾಡುವಾಗ ಶಂಖವನ್ನು ಊದುತ್ತಾರೆ. ಇದರಿಂದ ಮನೆಗೆ ಒಳ್ಳೆ ಯದೆಂದು ಹಿರಿಯರು ಹೇಳುತ್ತಾರೆ. ಆದರೆ ಸಂಜೆಯ ವೇಳೆ ಶಂಖ ಊದಬಹುದೇ? ಎಂಬ ಪ್ರಶ್ನೆ ಹಲವರಲ್ಲಿ ಊಡಿರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಸಂಜೆಯ ವೇಳೆ ಮನೆಯಲ್ಲಿ ಪೂಜೆ ಮಾಡುವಾಗ ಶಂಖವನ್ನು ಊದಬಾರದು. ಏಕೆಂದರೆ ಸಂಜೆಯ ವೇಳೆ ದೇವಾನುದೇವತೆಗಳು ಮಲಗಿರುತ್ತಾರಂತೆ. ಆ ವೇಳೆ ಶಂಖ ಊದಿದರೆ ಅವರ ನಿದ್ರೆಗೆ ಭಂಗ ಬಂದು ಶಾಪ ನೀಡುತ್ತಾರಂತೆ, ಇದರಿಂದ ಆ ಮನೆಗೆ ಕೆಟ್ಟದಾಗುತ್ತದೆಯಂತೆ. ಆದಕಾರಣ ಸಂಜೆ ಮಾತ್ರ ಶಂಖ ಊದಬಾರದೆಂದು ಹೇಳುತ್ತಾರೆ.