ಈ ಮರಗಳನ್ನು ಪೂಜಿಸಿದರೆ ಏನಾಗುತ್ತದೆ ಗೊತ್ತಾ?

ಮಂಗಳವಾರ, 29 ಸೆಪ್ಟಂಬರ್ 2020 (11:03 IST)
ಬೆಂಗಳೂರು: ಹಿಂದೂ ಧರ್ಮದಲ್ಲಿ ಮರಗಳಲ್ಲಿಯೂ ಕೂಡ ದೇವರನ್ನು ಕಾಣುತ್ತಾರೆ. ಮರಗಳಲ್ಲಿ ದೇವರು ನೆಲೆಸಿರುತ್ತಾರೆ ಎಂಬುದು ಅವರ ನಂಬಿಕೆ. ಹಾಗಾದ್ರೆ ಆ ಮರಗಳನ್ನು ಪೂಜಿಸುವುದರಿಂದ ಏನು ಫಲ ಎಂಬುದನ್ನು ತಿಳಿದುಕೊಳ್ಳಿ.

*ಅಶ್ವತ ಮರ : ಈ ಮರದಲ್ಲಿ ಹರಿಹರರು ನೆಲೆಸಿರುತ್ತಾರೆ ಎಂದು ಹೇಳುತ್ತಾರೆ. ಇದನ್ನು ಪೂಜಿಸುವುದರಿಂದ ರೋಗರುಜಿನಗಳು ಹತ್ತಿರ ಬರುವುದಿಲ್ಲ.

*ಆಲದ ಮರ : ಈ ಮರದಲ್ಲಿ ಮುಕೋಟಿ ದೇವತೆಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ. ಇದನ್ನು ಪೂಜಿಸಿದರೆ ದುಃಖ ದೂರವಾಗುತ್ತದೆ.

* ಬಿಲ್ವ ಪತ್ರೆ: ಇದು ಶಿವನಿಗೆ ಪ್ರಿಯವಾದ ಮರವಾಗಿದ್ದು, ಇದರಲಲ್ಇ ಲಕ್ಷ್ಮೀ ನೆಲೆಸಿರುತ್ತಾಳಂತೆ. ಇದನ್ನು ಪೂಜಿಸುವುದರಿಂದ ಸಂಕಷ್ಟಗಳು ನಿವಾರಣೆಯಾಗುತ್ತದೆಯಂತೆ.

*ಬಾಳೆಮರ: ಈ ಮರದಲ್ಲಿ ಲಕ್ಷ್ಮೀ-ವಿಷ್ಣು ವಾಸವಾಗಿರುತ್ತಾರಂತೆ. ಇದನ್ನು ಪೂಜಿಸಿದರೆ ಆ ಮನೆಯಲ್ಲಿ  ಸಮೃದ್ಧಿ ನೆಲೆಸಿರುತ್ತದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ